ಬಾಗಲಕೋಟೆ: ಮೀಸಲಾತಿ ವಿಚಾರವನ್ನು ಬಿಜೆಪಿ ಗೊಂದಲದ ಗೂಡಾಗಿಸಿದ್ದು, ಮುಂದಿನ ಚುನಾವಣೆಯಲ್ಲಿ ಅವರಿಗೆ ಮುಳ್ಳಾಗುವುದು ನಿಶ್ಚಿತ ಎಂದು ಕೆಪಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಭವಿಷ್ಯ ನುಡಿದಿದ್ದಾರೆ.
ಪ್ರಜಾಧ್ವನಿ ಯಾತ್ರೆಯಲ್ಲಿ ಪಾಲ್ಗೊಳ್ಳುವ ಮುನ್ನ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಂಚಮಸಾಲಿ ಜಗದ್ಗುರು ಡಾ.ಬಸವಜಯ ಮೃತ್ಯುಂಜಯ ಸ್ವಾಮೀಜಿ ಹೇಳಿದಂತೆ ಸರ್ಕಾರ ತುಪ್ಪವನ್ನು ತಲೆ ಮೇಲೆ ಇಟ್ಟಿದೆ. ತಿನ್ನೋದಕ್ಕೂ ಆಗುವುದಿಲ್ಲ, ವಾಸನೆ ತೆಗೆದುಕೊಳ್ಳುವುದಕ್ಕೂ ಆಗುವುದಿಲ್ಲ. ೨ಡಿ, ೨ಸಿ ಎಂಬುದನ್ನು ಸರ್ಕಾರ ಹೇಳಿದೆ. ಕಾನೂನಿನ ಚೌಕಟ್ಟಿನಲ್ಲಿ ಮಾಡಲು ಆಗದಿರುವುದನ್ನು ರಾಜ್ಯ ಸರ್ಕಾರ ಮಾಡಿದೆ. ಅದೇ ಕಾರಣಕ್ಕಾಗಿಯೇ ಪಂಚಮಸಾಲಿ ಸಮುದಾಯ ಹೋರಾಟವನ್ನು ಮುಂದವರಿಸಿದೆ ಎಂದರು.