ಬೆಂಗಳೂರು: ಬಿಜೆಪಿ ಮುಖಂಡ ಮುನಿರಾಜು ಮನೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು ಈ ವೇಳೆ 2,500 ಸೀರೆಗಳು ಪತ್ತೆಯಾಗಿವೆ.
ಚುನಾವಣಾ ಅಧಿಕಾರಿಗಳಿಗೆ ಬಂದ ದೂರಿನ ಮೇರೆಗೆ ಚುನಾವಣಾ ಫ್ಲೈಯಿಂಗ್ ಸ್ವ್ಕಾಡ್ ಮತ್ತು ಜಿಎಸ್‌ಟಿ ಅಧಿಕಾರಿಗಳು ಏರ್‌ಪೋರ್ಟ್ ರಸ್ತೆಯ ಅಗ್ರಹಾರ ಬಡಾವಣೆಯಲ್ಲಿರೋ ಅವರ ಮನೆ ಮೇಲೆ ದಾಳಿ ಮಾಡಿದ್ದಾರೆ. ದಾಳಿ ವೇಳೆ ದೊರೆತ ಸೀರೆಗಳ ಬಗ್ಗೆ ಅಧಿಕಾರಿಗಳು ಮಾಹಿತಿ ಕಲೆ ಹಾಕುತ್ತಿದ್ದು, ಇದಕ್ಕೆ ಸಂಬಂಧಿಸಿದ ಜಿಎಸ್‌ಟಿ ಬಿಲ್ ಇರುವುದಾಗಿ ಮುನಿರಾಜು ಹೇಳಿದ್ದಾರೆ. ಅಲ್ಲದೇ ನಮ್ಮದು ಎಸ್ಎಲ್ವಿ ಎಂಟರ್ ಪ್ರೈಸಸ್ ಎಂಬ ರಿಜಿಸ್ಟರ್ ಉದ್ಯಮವಿದೆ. ಇದಕ್ಕೆ ಜಿಎಸ್‌ಟಿ ಕೂಡ ಇದೆ. ನಾವು ಸೀರೆ ತಂದು ಮಾರಾಟ ಮಾಡುತ್ತೇವೆ. ಇದು ಯಾವುದೂ ಚುನಾವಣಾ ಉದ್ದೇಶಕ್ಕೆ ತಂದಿರುವುದಲ್ಲ ಎಂದಿದ್ದಾರೆ.
ಮನೆಯಲ್ಲಿ ವೋಟರ್ ಐಡಿಗೆ ಸಂಬಂಧಿಸಿ ಕೆಲವು ಫಾರ್ಮ್ ಪತ್ತೆಗೆ ಸಂಬಂಧಿಸಿ ಮಾತನಾಡಿದ ಅವರು ಹೊಸದಾಗಿ ವೋಟರ್ ಐಡಿ ರೆಡಿ ಮಾಡಲು ಫಾರ್ಮ್ ನಂ 6 ಸಿಕ್ಕಿದೆ. ವೋಟರ್ ಐಡಿ ಇಲ್ಲದೆ ಇರುವವರಿಗೆ ವೋಟರ್ ಐಡಿ ಮಾಡಲು ಸಹಾಯ ಮಾಡ್ತೀವಿ. ಯಾರು ವೋಟರ್ ಐಡಿ ಬೇಕು ಅಂತಾ ಬರ್ತಾರೆ. ಅವರ ಫಾರ್ಮ್ ಫಿಲ್ ಮಾಡಿ ಪೊಟೋ ಅಂಟಿಸಿ ಕೊಡ್ತಿದ್ವಿ. ಇದು ಯಾವುದೇ ರೀತಿಯ ಕಾನೂನು ಬಾಹಿರ ಕೃತ್ಯ ಅಲ್ಲ. ನಾವು ಅಪ್ಲೋಡ್ ಮಾಡಿದ ಫಾರ್ಮ್ ಅನ್ನ ಚುನಾವಣಾ ಅಧಿಕಾರಿಗಳು ಪರಿಶೀಲನೆ ನಡೆಸುತ್ತಾರೆ ಎಂದಿದ್ದಾರೆ.
ಸದ್ಯ ಅಧಿಕಾರಿಗಳು ಮುನಿರಾಜು ಅವರು ನೀಡಿರುವ ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.