ಕೊಪ್ಪಳ: ಕುಷ್ಟಗಿ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಟಿಕೆಟ್ ಆಕಾಂಕ್ಷಿ ದೊಡ್ಡನಗೌಡ ಪಾಟೀಲ ಅವರು ಪ್ರಚಾರ ನಡೆಸುವ ವೇಳೆಯಲ್ಲಿ ಗ್ರಾಪಂ ಸದಸ್ಯರೊಬ್ಬರು ದೊಡ್ಡನಗೌಡ ಅವರಿಗೆ ಜೋಡು ಟಗರುಗಳನ್ನು ದೇಣಿಗೆಯಾಗಿ ನೀಡಿದರು.
ತಾಲೂಕಿನ ಕಳಮಳ್ಳಿ ಗ್ರಾಪಂ ಸದಸ್ಯರಾದ ಭೀಮಣ್ಣ ಬೇವೀನಾಳ ತಮ್ಮ 2 ಟಗರುಗಳನ್ನು ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಅವರು ಮೇ 10ರಂದು ನಡೆಯುವ ಚುನಾವಣೆಯಲ್ಲಿ ಗೆಲ್ಲಬೇಕು ಎಂದು ಟಗರು ನೀಡಿರುವುದಾಗಿ ಹೇಳಿದರು.