ಹುಬ್ಬಳ್ಳಿ: ಬಿಜೆಪಿಯವರು ಜಾತಿ ಧರ್ಮವನ್ನು ತಮ್ಮ ಅಭಿವೃದ್ಧಿ ಕಾರ್ಯಗಳ ಹಬ್ ಆಗಿ ಮಾಡಿಕೊಂಡಿದ್ದಾರೆ ಎಂದು ಕಾಂಗ್ರೆಸ್ ಮುಖಂಡ ಮಧು ಬಂಗಾರಪ್ಪ ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ನಗರದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಹಿಂದೆ ಬ್ರಿಟಿಷ್‌ರು ದೇಶದಲ್ಲಿ ಒಡೆದು ಆಳುವ ನೀತಿ ಅನುಸರಿಸಿ ದೇಶವನ್ನು ಕೊಳ್ಳೆಹೊಡೆದರು. ಅದೇ ಮಾದರಿಯಲ್ಲಿ ಬಿಜೆಪಿ ನಡೆಯುತ್ತಿದೆ. ಬಿಜೆಪಿ ಎಂದರೆ ಬ್ರಿಟಿಷ್ ಜನತಾ ಪಕ್ಷ. ಒಡೆದು ಹಾಳುವ ನೀತಿಯಲ್ಲಿಯೇ ಅವರು ಕೆಲಸ ಮಾಡುತ್ತಿದ್ದಾರೆ. ಬಿಜೆಪಿಗೆ ಅಧಿಕಾರದಲ್ಲಿ ಇರಬೇಕು ಕಮಿಷನ್ ಬರಬೇಕು ಎಂಬುದು ಅಷ್ಟೇ ಎಂದು ಹರಿಹಾಯ್ದರು.
ಬಿಜೆಪಿಯವರು ಭ್ರಷ್ಟಾಚಾರದ ಹಣದಿಂದ ಸಮಾವೇಶ ಮಾಡಿ ಜನರಿಗೆ ಬಿರಿಯಾನಿ ಊಟಾ ಹಾಕಿಸುತ್ತಿದ್ದಾರೆ. ಆದರೆ ಜನರು ಬಿರಿಯಾನಿ ತಿಂದು ಎದ್ದು ಹೋಗುತ್ತಿದ್ದಾರೆ. ಆಮೇಲೆ ಬಿಜೆಪಿಯವರು ಖಾಲಿ ಚೇರ್ ಗಳಿಗೆ ಭಾಷಣ ಮಾಡುತ್ತಿದ್ದಾರೆ. ಇದು ಕಾಂಗ್ರೆಸ್ ಪಕ್ಷದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ ಎಂದು ವ್ಯಂಗ್ಯವಾಡಿದರು.