ಬಿಜೆಪಿ ಆಯ್ಕೆಪಟ್ಟಿ ಕಸರತ್ತು; ನಾಯಕರು ಸುಸ್ತೋ ಸುಸ್ತು.. ಇಂದು-ನಾಳೆ ಪಟ್ಟಿ ಬಿಡುಗಡೆ ಡೌಟು

ಬಿಜೆಪಿ
Advertisement

ಬಿಜೆಪಿ ಅಭ್ಯರ್ಥಿಗಳ ಪಟ್ಟಿ ನಾಳೆ ಅಥವಾ ನಾಡಿದ್ದು ಬಿಡುಗಡೆಯಾಗಲಿದೆ ಎಂದು ತಿಳಿದು ಬಂದಿದೆ. ದೆಹಲಿಯಲ್ಲಿಂದು ಬಿಜೆಪಿ ಅಭ್ಯರ್ಥಿಗಳ ಆಯ್ಕೆಪಟ್ಟಿ ಕಸರತ್ತು ಮುಂದುವರೆದಿದೆ. ರಾಜ್ಯ ಮತ್ತು ಕೇಂದ್ರದ ನಾಯಕರು ಜತೆಗೂಡಿ ಸಭೆ ನಡೆಸಿದ್ದಾರೆ. ಆದರೆ ಪಟ್ಟಿ ಬಿಡುಗಡೆಗೆ ವಿಳಂಬವಾಗುತ್ತಿದ್ದು, ಟಿಕೆಟ್‌ ಆಕಾಂಕ್ಷಿಗಳಲ್ಲಿ ಇನ್ನಷ್ಟು ಆತಂಕ ಉಂಟುಮಾಡಿದೆ.
ದೆಹಲಿಯಲ್ಲಿ ಕೇಸರಿ ಪಡೆ ಸಭೆ ಮೇಲೆ ಸಭೆ ನಡೆಸುತ್ತಿದ್ದು, ಸಂಜೆ ಮತ್ತೆ ಮತ್ತೊಂದು ಸುತ್ತಿನ ಸಭೆ ಹಿರಿಯರ ಜೊತೆಗೆ ನಡೆಯಲಿ. ಅಲ್ಲದೆ ಇಂದು ಸಂಜೆಯೊಳಗೆ ಮೂರು ಸರ್ವೆಯ ವರದಿ ಬರಲಿದ್ದು. ವರದಿ ಬಂದ ಬಳಿಕ ಇಂದು ರಾತ್ರಿ ಮತ್ತೊಂದು ಸುತ್ತಿನ ನಾಯಕರ ಸಭೆ ನಡೆಯಲಿದೆ. ತದ ನಂತರವೆ ಟಿಕೆಟ್ ಫೈನಲ್ ಆಗಲಿದೆ.