ಮಂಡ್ಯ: ಬಿಜೆಪಿಯವರ ದುರಾಡಳಿತದಿಂದ ದೇಶದ ಜನ ತತ್ತಿರಿಸುತ್ತಿದ್ದಾರೆ. ಎಲ್ಲದಕ್ಕೂ GST ಹಾಕಿ ಜನರ ರಕ್ತ ಹೀರುತ್ತಿದ್ದಾರೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಮಂಡ್ಯದಲ್ಲಿ ಮಾತನಾಡಿ ಸಿದ್ದರಾಮಯ್ಯ ಅವರು ‘ಬಿಜೆಪಿಯವರು ನಾಚಿಗೆಟ್ಟವರು ಮಾನಗೆಟ್ಟವರು. ಗಣೇಶನ ಮೆರವಣಿಗೆಯಲ್ಲಿ ಗೋಡ್ಸೆ ಮತ್ತು ಸಾವರ್ಕರ್ ಫೋಟೊ ಹಾಕಿಕೊಂಡು ಮೆರವಣಿಗೆ ಮಾಡ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಕೊಡಿಸಿದ ಗಾಂಧೀಜಿಯನ್ನು ಕೊಂದವರನ್ನು ಇವರು ವೈಭವೀಕರಿಸುತ್ತಾ ಇದ್ದಾರೆ. ಇವರ ಈ ಕೋಮುವಾದ ರಾಜಕಾರಣದಿಂದ ದೇಶದಲ್ಲಿ ಅಶಾಂತಿ ಸೃಷ್ಟಿಯಾಗಿದೆ. ಇವರ ಈ ದುರಾಡಳಿತದಿಂದ ದೇಶದ ಜನ ತತ್ತರಿಸುತ್ತಿದ್ದಾರೆ. ಎಲ್ಲದಕ್ಕೂ GST ಹಾಕಿ ಜನರ ರಕ್ತ ಹೀರುತ್ತಿದ್ದಾರೆ. ಎಂದು ವಾಗ್ದಾಳಿ ನಡೆಸಿದ್ದಾರೆ.