ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ

Advertisement

ಇಳಕಲ್: ಶಿಸ್ತಿನ ಪಕ್ಷವಾದ ಬಿಜೆಪಿಯಲ್ಲಿ ಯಾವುದೇ ಗೊಂದಲವಿಲ್ಲ ಹೈಕಮಾಂಡ್ ಯಾರಿಗೆ ಟಿಕೇಟ್ ಕೊಡುತ್ತೋ ಅವರು ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ಬಿಜೆಪಿ ನಗರ ಘಟಕ ಅಧ್ಯಕ್ಷ ಅರವಿಂದ ಮಂಗಳೂರು ಹೇಳಿದರು ‌ಬಿಜೆಪಿ ಕಾರ್ಯಾಲಯದಲ್ಲಿ ಬುಧವಾರದಂದು ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ದೊಡ್ಡನಗೌಡ ಪಾಟೀಲ ಮತ್ತೇ ಟಿಕೇಟ್ ಪಡೆದುಕೊಳ್ಳುತ್ತಾರೆ ಅದರಲ್ಲಿ ಯಾವ ಸಂಶಯವೂ ಇಲ್ಲ ಆದರೂ ಹೈಕಮಾಂಡ್ ಕೊನೆಯ ಘಳಿಗೆಯಲ್ಲಿ ಯಾವದೇ ಬದಲಾವಣೆಯಾದರೆ ಅದಕ್ಕೆ ಪಕ್ಷದ ಎಲ್ಲಾ ಪದಾಧಿಕಾರಿಗಳ ಬೆಂಬಲ ಇದೆ ಈ ನಿಟ್ಟಿನಲ್ಲಿ ಡಾ ಮಹಾಂತೇಶ ಕಡಪಟ್ಟಿ ನಾನೂ ಟಿಕೇಟ್ ಆಕಾಂಕ್ಷಿ ಎಂದು ಹೇಳಿದ್ದಾರೆ ಇಲ್ಲಿ ಯಾವುದೇ ಬಂಡಾಯ ಅಭ್ಯರ್ಥಿ ಎಂಬ ಮಾತೇ ಇಲ್ಲ ಎಂದವರು ಸ್ಪಷ್ಟ ಪಡಿಸಿದರು.
ಡಾ ಮಹಾಂತೇಶ ಕಡಪಟ್ಟಿ ಮಾತನಾಡಿ ಪಕ್ಷದ ಹೈಕಮಾಂಡ್ ಯಾವದೇ ಬದಲಾವಣೆ ಅಥವಾ ಯಾವದೇ ಪ್ರಯೋಗ ಮಾಡಲು ನಡೆಸುವ ಅಭ್ಯರ್ಥಿಗಳ ಆಯ್ಕೆಯಲ್ಲಿ ಇರಲಿ ಎಂದು ನನ್ನ ಹೆಸರನ್ನು ಸೇರಿಸಿರುವೆ. ನನ್ನ ಹಾಗೆ ಇನ್ನೂ ಕೆಲವರು ಆಕಾಂಕ್ಷಿಗಳು ಇದ್ದಾರೆ ಯಾರಿಗೆ ಟಿಕೇಟ್ ಸಿಕ್ಕರೂ ಸ್ವಸಂತೋಷದಿಂದ ಪಕ್ಷದ ಕೆಲಸ ಮಾಡುವುದಾಗಿ ಹೇಳಿದರು.
ಜಿಲ್ಲಾ ಪಂಚಾಯತ ಮಾಜಿ ಸದಸ್ಯರಾದ ವಿರೇಶ ಉಂಡೋಡಿ ಮತ್ತು ಶಶಿಕಾಂತ ಪಾಟೀಲ ಪಕ್ಷ ಮತ್ತು ಶಾಸಕರ ವಿರುದ್ಧ ಬಹಿರಂಗವಾಗಿ ಮಾತನಾಡುತ್ತಿದ್ದು ಅವರ ಮೇಲೆ ಯಾಕೆ ಕ್ರಮ ಕೈಗೊಂಡಿಲ್ಲ ಎಂಬ ಪ್ರಶ್ನೆಗೆ ಉತ್ರರಿಸಿದ ಗ್ರಾಮೀಣ ಮಂಡಳ ಅಧ್ಯಕ್ಷ ಮಹಾಂತಗೌಡ ಪಾಟೀಲ ತೊಂಡಿಹಾಳ ಈ ಬಗ್ಗೆ ಜಿಲ್ಲಾ ಅಧ್ಯಕ್ಷ ಮತ್ತು ರಾಜ್ಯ ಅಧ್ಯಕ್ಷರಿಗೆ ದೂರು ನೀಡಲಾಗಿದೆ ಸೂಕ್ತ ಸಮಯದಲ್ಲಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗುವದು ಎಂದರು ಸುದ್ದಿಗೋಷ್ಠಿಯಲ್ಲಿ ಪ್ರವೀಣ ಹಳೆಪೇಟೆ, ಅರುಣ ದುದ್ಗಿ ಬಸವರಾಜ ಹುನಕುಂಟಿ ಉಪಸ್ಥಿತರಿದ್ದರು.