ಬಿಜೆಪಿದು ಗೂಂಡಾಗಿರಿ ಸಂಸ್ಕೃತಿ

Advertisement

ಹುಬ್ಬಳ್ಳಿ: ಬಿಜೆಪಿಗೆ ಒಳ್ಳೆಯ ಸಂಸ್ಕೃತಿ ಗೊತ್ತಿಲ್ಲ. ಕೇವಲ ವಾಮಮಾರ್ಗದಿಂದ ರಾಜಕೀಯ ಮಾಡುತ್ತಾರೆ‌. ಗೂಂಡಾಗಿರಿ ಮತ್ತು ಅಸಭ್ಯ ಸಂಸ್ಕತಿಯಾಗಿದೆ ಎಂದು ಮಾಜಿ ಸಚಿವ ಬಸವರಾಜ ರಾಯರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯನವರನ್ನು ಮುಗಿಸೋದು ಅಂದ್ರೆ ಜೀವದಿಂದ ತೆಗಿರಿ ಎನ್ನುವ ಅರ್ಥ. ಈ ರೀತಿಯ ಪ್ರಚೋದನೆ ನೀಡುವುದು ಐಪಿಸಿ 302 ಆಗುತ್ತದೆ. ಇದು ಕ್ರಿಮಿನಲ್ ಮೈಂಡ್. ಅಶ್ವಥ್ ನಾರಾಯಣ್ ಮಂತ್ರಿಯಾಗುವಾಗ ರಾಗ ದ್ವೇಷ ಮಾಡಲ್ಲ ಅಂತ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ. ಆದರೆ ಈಗ ಅದನ್ನು ಮರೆತು ಮಾತನಾಡುತ್ತಿದ್ದಾರೆ. ಇದು ಯಾವ ನೈತಿಕತೆ. ಜನರಿಗೆ ಪ್ರಚೋದನೆ ನೀಡುವ ಕೆಲಸ ಮಾಡುತ್ತಿದ್ದಾರೆ. ಪ್ರಮಾಣ ವಚನ ಮರೆತವರು ಅವರ ಸ್ಥಾನಕ್ಕೆ ವಜಾ ಆಗಲು ಅರ್ಹರು. ಇದನ್ನು ರಾಜ್ಯಪಾಲರು ಗಮನಿಸಿ ಅವರನ್ನು ವಜಾ ಮಾಡಬೇಕು ಎಂದರು.