ಬಿಜೆಪಿಗರಿಗೆ ಮಾಡಲು ಕೆಲಸವಿಲ್ಲ: ಎಸ್ಸೆಸ್ ವಾಗ್ದಾಳಿ

Advertisement

ದಾವಣಗೆರೆ: ಬಿಜೆಪಿಯವರಿಗೆ ಮಾಡಲು ಕೆಲಸ ಇಲ್ಲದೇ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ವನ್ಯಜೀವಿ ಅಕ್ರಮ ಸಾಕಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಎಸ್.ಎಸ್. ಮಲ್ಲಿಕಾರ್ಜುನ ಬಂಧನಕ್ಕೆ ಆಗ್ರಹಿಸಿ ಬಿಜೆಪಿ ನಾಯಕರು ನಡೆಸುತ್ತಿರುವ ಹೋರಾಟ ಕುರಿತು ದಕ್ಷಿಣ ಶಾಸಕ ಶಾಮನೂರು ಶಿವಶಂಕರಪ್ಪ ವಾಗ್ದಾಳಿ ನಡೆಸಿದರು.
ದಾವಣಗೆರೆಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಮನೂರು, ನಮ್ಮ ಬಳಿ ನೂರು ಹಸುಗಳಿವೆ. 40 ಕುದುರೆಗಳಿವೆ. ಆದರೆ, ಬಿಜೆಪಿಯವರು ಒಂದು ಆಕಳು, ಕುದುರೆ, ಎತ್ತು ಸಾಕಿದ್ದಾರಾ ಎಂದು ತಿರುಗೇಟು ನೀಡಿದರು‌. ಬಿಜೆಪಿಯವರಿಗೆ ಮಾಡಲು ಕೆಲಸ ಅಲ್ಲ. ಹಾಗಾಗಿ ಪ್ರತಿಭಟನೆ ಮಾಡುತ್ತಿದ್ದಾರೆ.ಇದಕ್ಕಿಂತ ಹೆಚ್ಚೇನು ಮಾತನಾಡುವುದಿಲ್ಲ. ಕೆಲಸವಿಲ್ಲದವರು ಅವರು ಎಂದು ಛೇಡಿಸಿದರು.
ಪಂಚಮಸಾಲಿ ಲಿಂಗಾಯತ ಸಮಾಜಕ್ಕೆ ಸರ್ಕಾರ ಘೋಷಿಸಿರುವ ಮೀಸಲಾತಿ ಎಲ್ಲವೂ ತಿರುಗ ಮುರುಗ ಆಗಿದ್ದು, ಸರ್ಕಾರಕ್ಕೂ ನೀಡಿರುವ ಮೀಸಲಾತಿ ಬಗ್ಗೆ ಗೊಂದಲವಿದೆ. ನಾವಂದುಕೊಂಡಂತೆ ಮೀಸಲಾತಿ ನೀಡಿಲ್ಲ ಎಂದು ಹೇಳಿದರು. ಪ್ರಧಾನಿ ನರೇಂದ್ರ ಮೋದಿ ಅವರ ತಾಯಿ ನಿಧನದ ಸುದ್ದಿ ಕೇಳಿ ಬೇಸರವಾಯಿತು. ಅವರ ಆತ್ಮಕ್ಕೆ ಶಾಂತಿ ಕೋರುತ್ತೇನೆ ಎಂದರು‌.