ಶಿವಮೊಗ್ಗ: ಸೋಗಾನೆಯಲ್ಲಿ ಶಿವಮೊಗ್ಗದ ವಿಮಾನ ನಿಲ್ದಾಣ ಸೇರಿದಂತೆ ಇಂದು 7 ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ ಬಿಎಸ್‌ವೈ ನಡೆದು ಬಂದ ದಾರಿ, ಅವರ ಹೋರಾಟ ನೆನೆದು ಬಡವರ ಪರ ಹೋರಾಡುವ ಧೀಮಂತ ನಾಯಕ ಎಂದು ಹೊಗಳಿದರು. ಹುಟ್ಟು ಹಬ್ಬದ ದಿನವಾದುದ್ದರಿಂದ ಮೊಬೈಲ್ ಫ್ಲಾಶ್ ಲೈಟ್ ಆನ್ ಮಾಡಿಸಿ ವಿಶೇಷ ರೀತಿಯಲ್ಲಿ ಶುಭ ಕೋರಿಸಿದರು.
ಆರಂಭದಲ್ಲಿ ಕನ್ನಡದಲ್ಲಿ ಭಾಷಣ ಮಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಶಿವಮೊಗ್ಗ ಏರ್‌ಪೋರ್ಟ್ ಉದ್ಘಾಟನೆ ಮತ್ತು ವಿವಿಧ 6 ಕಾಮಗಾರಿಗಳಿಗೆ ಉದ್ಘಾಟನೆ ಮತ್ತು ಶಂಕುಸ್ಥಾಪನೆ ಮಾಡಿದರು. ಶಿವಮೊಗ್ಗದಲ್ಲಿ ಉದ್ಘಾಟನೆಗೊಳ್ಳುತ್ತಿರುವ ಹಲವು ಕಾಮಗಾರಿಗಳ ಉದ್ಘಾಟನೆ ನನ್ನ ಸೌಭಾಗ್ಯವೆಂದರು.
ಅನೇಕ ವರ್ಷಗಳ ಹಿಂದೆಯಿಂದ ಇದ್ದ ಶಿವಮೊಗ್ಗ ಜನರ ಕನಸು ಇಂದು ನನಸಾಗಿದೆ. ಶಿವಮೊಗ್ಗದ ಏರ್‌ಪೋರ್ಟ್ ಸುಂದರವಾಗಿದೆ. ಇದರಿಂದ ತಂತ್ರಜ್ಞಾನ ಮತ್ತು ಸಂಸ್ಕೃತಿಯ ಸಂಗಮವಾಗಲಿದೆ ಎಂದರು.