ಬಾಲೆಹೊಸೂರು ದಿಂಗಾಲೇಶ್ವರ ಮಠ ಜಲಾವೃತ

balehosur
Advertisement

ಗದಗ: ಜಿಲ್ಲೆಯಾದ್ಯಂತ ಗುರುವಾರ ಮುಂಜಾನೆಯಿಂದ ಸತತ ಸುರಿದ ಮಳೆಯಿಂದಾಗಿ ಲಕ್ಷ್ಮೇಶ್ವರ ತಾಲೂಕಿನ ಬಾಲೆಹೊಸೂರು ಗ್ರಾಮದ ದಿಂಗಾಲೇಶ್ವರ ಮಠದ ಆವರಣಕ್ಕೆ ಮಳೆ ನೀರು ನುಗ್ಗಿ ಶ್ರೀಮಠ ಬಹುತೇಕ ಜಲಾವೃತವಾಗಿದೆ.
ಸಂಜೆ ಸುರಿದ ಭಾರೀ ಮಳೆಗೆ ಶ್ರೀಮಠದ ಆವರಣ ಕೆರೆಯಂತಾಗಿದೆ. ಮಠಕ್ಕೆ ಸುತ್ತಲಿನ ಗ್ರಾಮ ಹಾಗೂ ರಸ್ತೆಗಳಿಂದ ಭಾರಿ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ. ಮಠದ ಆವರಣದಲ್ಲಿ ಸುಮಾರು ಮೂರು ಅಡಿಗಿಂತಲೂ ಹೆಚ್ಚಿನ ಪ್ರಮಾಣದ ನೀರು ನಿಂತಿದೆ. ಗ್ರಾಮದಲ್ಲಿನ ಕಿರಿದಾದ ಗಟಾರುಗಳಿಂದಾಗ ನೀರು ಸರಾಗವಾಗಿ ಹೋಗದೆ ಮಠದ ಆವರಣಕ್ಕೆ ಮಳೆ ನೀರು ನುಗ್ಗಿದೆ. ಮಠದ ಆವರಣದಲ್ಲಿ ನಿಲ್ಲಿಸಿದ್ದ ಬೈಕ್‌ಗಳು ತೇಲಾಡುತ್ತಿವೆ. ಮಠದಿಂದ ಆಚೆ ಬಾರದ ಸ್ಥಿತಿಯಲ್ಲಿರುವ ಭಕ್ತರು, ಮಠದ ಸಿಬ್ಬಂದಿ ತೀವ್ರವಾಗಿ ಪರಿತಪಿಸುತ್ತಿದ್ದಾರೆ. ರಾತ್ರಿ 10ರ ಸುಮಾರಿಗೆ ಮಳೆ ನಿಂತಿದ್ದು, ನೀರು ಇಳಿಮುಖವಾಗಿದೆ ಎಂದು ಮೂಲಗಳು ತಿಳಿಸಿವೆ.