ಬಾಲಕನ ಚಪ್ಪಲಿಯ ಬೆಲ್ಟ್ ಹಾಕಿದ ರಾಹುಲ್

ರಾಹುಲ್ ಗಾಂಧಿ
Advertisement

ಚಿತ್ರದುರ್ಗ: ತಾಯಿಯ ಶೂ ಲೇಸ್‌ನ್ನು ಸರಿಪಡಿಸಿ ಗಮನ ಸೆಳೆದಿದ್ದ ಕಾಂಗ್ರೆಸ್ ಯುವ ನಾಯಕ ರಾಹುಲ್ ಗಾಂಧಿ ಮಂಗಳವಾರ ಜಿಲ್ಲೆಯ ಚಳ್ಳಕೆರೆಯ ಸಿದ್ದಾಪುರ ಗೇಟ್ ಸಮೀಪ ಪಾದಯಾತ್ರೆಯಲ್ಲಿ ಭಾಗವಹಿಸಿದ್ದ ಬಾಲಕನೊಬ್ಬನ ಚಪ್ಪಲಿಯ ಬೆಲ್ಟ್‌ನ್ನು ಸರಿಪಡಿಸಿ ಇದೀಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ.
ಭಾರತ್ ಜೋಡೋ ಪಾದಯಾತ್ರೆ 12ನೇ ದಿನವಾದ ಇಂದು ಬೆಳಗ್ಗೆ ಹರ್ತಿಕೋಟೆಯಿಂದ ಹೊರಟು ಸಂಜೆ 6 ಗಂಟೆ ಸುಮಾರಿನಲ್ಲಿ ಚಳ್ಳಕೆರೆಯ ಸಿದ್ದಾಪುರ ಗೇಟ್ ಸಮೀಪ ಪಾದಯಾತ್ರೆ ಸಾಗಿ ಬರುವ ವೇಳೆ ಪೋಷಕರ ಜೊತೆ ಆಗಮಿಸಿದ್ದ ಪುಟ್ಟ ಬಾಲಕನೊಬ್ಬ ರಾಹುಲ್ ಗಾಂಧಿ ಬಂದಿದ್ದಾನೆ. ಆಗ ಫೋಟೋ ತೆಗೆಯಲು ಹೇಳಿದ ರಾಹುಲ್ ಬಾಲಕನನ್ನು ತನ್ನ ತೋಳಿನ ಬಲಕ್ಕೆ ಎತ್ತಿ ಕೊಳ್ಳಲು ಹೋದಾಗ ಚಪ್ಪಲಿಯ ಬೆಲ್ಟ್ ಬಿಚ್ಚಿಕೊಂಡಿತು. ಆ ಬೆಲ್ಟ್‌ನ್ನು ಸ್ವತಃ ಬಾಲಕ ಸರಿಪಡಿಸಿಕೊಳ್ಳಲು ಮುಂದಾದರು ಬೆಲ್ಟ್ ಸರಿಯಾಗಿ ಕೂರದ ಕಾರಣ ರಾಹುಲ್ ಗಾಂಧಿ ಬಾಲಕನ ಚಪ್ಪಲಿಯ ಬೆಲ್ಟ್‌ನ್ನು ಸರಿಪಡಿಸಿ ಪೋಟೋ ತೆಗೆಸಿಕೊಂಡರು. ಈ ಚಿತ್ರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.