ಬಾಗಲಕೋಟ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಭವ್ಯ ಮೆರವಣಿಗೆ

ಕನ್ನಡ ಸಾಹಿತ್ಯ ಸಮ್ಮೇಳನ
Advertisement

ಇಂದು ಬಾಗಲಕೋಟೆ ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಘಟಕ, ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕು ಘಟಕ ದ ಸಹಯೋಗದಲ್ಲಿ ಬಾಗಲಕೋಟ ತಾಲೂಕು ೮ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಎ.ಎಸ್.ಪಾವಟೆ ದಂಪತಿಗಳ ಹೊತ್ತ ಸಾರೋಟದ ಭವ್ಯ ಮೆರವಣಿಗೆ ನಡೆಯಿತು. ಇಂದು ಶನಿವಾರ ಬಾಗಲಕೋಟ ಬೀಳೂರು ಗುರುಬಸವ ಮಹಾಸ್ವಾಮೀಜಿ ದೇವಾಲಯ ದಿಂದ ಆರಂಭ ಗೊಂಡು ಬಸವೇಶ್ವರ ಸರ್ಕಲ್, ಜನತಾ ಬಜಾರ್, ವಲ್ಲಭಭಾಯಿ ಚೌಕ, ಕಪಡಾ ಬಜಾರ್ ಸೇರಿದಂತೆ ವಿವಿಧ ಪ್ರದೇಶದಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷರ ಮೆರವಣಿಗೆ ಸಂಚರಿಸಿ ಕೊನೆಗೆ ಚರಂತಿಮಠ ಕಲ್ಯಾಣ ಮಂಟಪಕ್ಕೆ ಬಂದು ತಲುಪಿತು. ಮೆರವಣಿಗೆ ಯಲ್ಲಿ ಜನಪದ ಕಲಾವಿದರು, ದೊಳ್ಳು ಕುಣಿತದವರು, ವೀರಗಾಸೆ ಕಲಾವಿದರ, ಭಜನಾ ಪದ ಕಲಾವಿದರು, ದುರ್ಗ ಮುರ್ಗಿ ಕಲಾವಿದರು, ಶಹನಾಹಿ ಕಲಾವಿದರು ತಮ್ಮ ಕಲಾಸಿರಿಯಿಂದ ಗಮನ ಸೆಳೆದರು.