ಬಾಗಲಕೋಟೆ : ವಿಜಯಪುರ ದಲ್ಲಿ ಸಿದ್ದೇಶ್ವರ ಶ್ರೀಗಳ ಅಂತಿಮ ದರ್ಶನಕ್ಕೆ ತೆರಳುವ ಭಕ್ತರಿಗಾಗಿ ಬುಧವಾರ ವಿಶೇಷ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ.
ಬಾಗಲಕೋಟೆ ನಗರದಿಂದ ವಿಜಯಪುರಕ್ಕೆ ತೆರಳಲು ನಿರಂತರವಾಗಿ ಬಸ್ ಗಳು ಸಂಚರಿಸಲಿವೆ. ಈ ಬಗ್ಗೆ ಮಾಹಿತಿ ನೀಡಿರುವ ವಾಕರಸಾ ಸಂಸ್ಥೆಯ ವಿಭಾಗೀಯ ಸಾರಿಗೆ ಅಧಿಕಾರಿ ಪಿ.ವಿ.ಮೇತ್ರಿ ‘ ಬಾಗಲಕೋಟೆಯ ಹಳೆಯ ಬಸ್ ನಿಲ್ದಾಣ, ನವನಗರ ಬಸ್ ನಿಲ್ದಾಣ ಗಳಿಂದ ಪ್ರಯಾಣಿಕರ ಸಂಖ್ಯೆಗೆ ಅನುಗುಣವಾಗಿ ಬಸ್ ಸಂಚಾರವಿರಲಿದೆ’ ಎಂದು ತಿಳಿಸಿದ್ದಾರೆ.