ಬಾಗಲಕೋಟೆಯಲ್ಲಿ ಸಹೋದರರ ಸವಾಲ್ ಫಿಕ್ಸ್..!

Advertisement

ಬಾಗಲಕೋಟೆ: ಹಾಲಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರಿಗೆ ಸೆಡ್ಡು ಹೊಡೆದಿರುವ ಅವರ ಸ್ವಂತ ಸಹೋದರ ಮಲ್ಲಿಕಾರ್ಜುನ ಚರಂತಿಮಠ ಕಣಕ್ಕಿಳಿಯುವುದು ಪಕ್ಕಾ ಆಗಿದೆ.

ಕಳೆದೊಂದು ವರ್ಷದಿಂದ ಶಾಸಕರ ವಿರುದ್ಧ ಗುಡುಗುತ್ತಲೇ ಇದ್ದ ಮಲ್ಲಿಕಾರ್ಜುನ ಚರಂತಿಮಠ ಅವರು ಪಕ್ಷದಿಂದ ಉಚ್ಛಾಟನೆಗೊಂಡಿದ್ದರು, ಪಕ್ಷದಿಂದ ಉಚ್ಛಾಟನೆಗೊಂಡವರು ಒಂದು ತಂಡ ಕಟ್ಟಿಕೊಂಡು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಬದಲಾವಣೆಗೆ ಒಟ್ಟು ಹಿಡಿದಿದ್ದರು. ಆದರೆ ಅದಾಗದ ಕಾರಣ ಮಲ್ಲಿಕಾರ್ಜುನ ಚರಂತಿಮಠ ಕಣಕ್ಕಿಳಿಯುವುದು ಫಿಕ್ಸ್ ಆಗಿದೆ.

ತಮ್ಮ ತಂಡದ ಪರವಾಗಿ ಒಮ್ಮತದ ಅಭ್ಯರ್ಥಿಯಾಗಿ ಮಲ್ಲಿಕಾರ್ಜುನ ಚರಂತಿಮಠ ಅವರನ್ನು ಕಣಕ್ಕಿಳಿಸಲು ತೀರ್ಮಾನಿಸಲಾಗಿದೆ ಎಂದು ಬಿಜೆಪಿಯ ಇನ್ನೋರ್ವ ಉಚ್ಛಾಟಿತ ಮುಖಂಡ ಸಂತೋಷ ಹೊಕ್ರಾಣಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಹೀಗಾಗಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಸಹೋದರರು ಮುಖಾಮುಖಿಯಾಗೋದು ಪಕ್ಕಾ ಆಗಿದೆ.