ಕಲಬುರಗಿ: ನಿನ್ನೆ ತಡರಾತ್ರಿ ಬಸ್ ನಿಲ್ದಾಣದಲ್ಲಿದ್ದ ನಿಲ್ಲಿಸಿದ್ದ ಬಸ್ ನ್ನೇ ಚಾಲಾಕಿ ಕಳ್ಳರು ಕದ್ದೊಯ್ದ ಘಟನೆ ಕಲಬುರಗಿ ಜಿಲ್ಲೆಯ ಚಿಂಚೋಳಿ ಬಸ್ ನಿಲ್ದಾಣದಲ್ಲಿ ನಡೆದಿದೆ.
ಬೀದರ್ ಬಸ್ ಡಿಪೋ ನಂಬರ್ 2 ಕ್ಕೆ ಸೇರಿದ ಸರ್ಕಾರಿ ಬಸ್ KA38 F 971 ನಂಬರ್ ನ ಬಸ್ ಕಳ್ಳತನ ಮಾಡಿದ ಮಾಡಲಾಗಿದೆ.
ನಸುಕಿನ ಜಾವ 3:30ರ ಸುಮಾರಿಗೆ ಬಸ್ ಕಳ್ಳತನ ಮಾಡಿದ ಖದೀಮರು ಮಿರಿಯಾಣ ಮಾರ್ಗವಾಗಿ ತಾಂಡುರ ಮೂಲಕ ತೆಲಂಗಾಣದ ಕಡೆ ತೆಗೆದುಕೊಂಡು ಹೋಗಿರುವ ಬಗ್ಗೆ ಸಂಶಯವ್ಯಕ್ತವಾಗಿದೆ.
ಬಸ್ ಹುಡುಕಾಟಕ್ಕಾಗಿ ಎರಡು ಪೊಲೀಸ್ ಟೀಮ್ ತೆಲಂಗಾಣಕ್ಕೆ ತೆರಳಿದ್ದು, ಸ್ಥಳಕ್ಕೆ ಚಿಂಚೋಳಿ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.