ಧಾರವಾಡ: ಧಾರವಾಡ-ಬೆಂಗಳೂರು ನಡುವೆ ಸಂಚರಿಸುವ ಸಿದ್ಧಗಂಗಾ ಇಂಟರ್ಸಿಟಿ ಎಕ್ಸ್‌ಪ್ರೆಸ್ ರೈಲು (ಸಂಖ್ಯೆ 12725/26) ಇಂದಿನಿಂದ ವಿದ್ಯುತ್ ಚಾಲಿತ ರೈಲಾಗಿ ಮಾರ್ಪಟ್ಟಿದೆ.
ಇಂದು ಬೆಂಗಳೂರಿನಿಂದ ಧಾರವಾಡಕ್ಕೆ ತನ್ನ ಮೊದಲ ಪಯಣ ಮಾಡಿದ್ದು, ರೈಲು ನಾಳೆ ಧಾರವಾಡದಿಂದ ಬೆಂಗಳೂರಿಗೆ ಮರಳಲಿದೆ. ಇನ್ನು ಮುಂದೆ ಈ ರೈಲು ಸಂಪೂರ್ಣ ವಿದ್ಯುತ್ ಚಾಲಿತ ರೈಲಾಗಿ ಸಂಚರಿಸಲಿದೆ.
ಇನ್ನು ಈ ಕುರಿತು ಟ್ವೀಟ್ ಮಾಡಿರುವ ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಪ್ರಧಾನಿ ನರೇಂದ್ರ ಮೋದಿ ಹಾಗೂ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹಾಗೂ ರೈಲ್ವೆ ಅಧಿಕಾರಿಗಳಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ.