ಬದಲಾದ ಟ್ವಿಟ್ಟರ್ ಲೋಗೋ

Advertisement

ಟ್ವಿಟರ್‌ನ ಲೋಗೊ ಬದಲಾಗಿದೆ. ಇಷ್ಟು ದಿನ ಆ ಗೌರವ ಪಡೆದಿದ್ದ ನೀಲಿ ಹಕ್ಕಿಯ ಜಾಗಕ್ಕೆ ಇದೀಗ ಶಿಬಾ ಇನು ಡಾಗ್ ಬಂದಿದೆ,

ಜನಜನಿತ ನೀಲಿ ಹಕ್ಕಿಯ ಚಿಹ್ನೆ ಬದಲಾಗಿದ್ದು, ಅದರ ಜಾಗದಲ್ಲಿ “ಶಿಬಾ ಇನು ಡಾಗ್” ಮೀಮ್ ಖ್ಯಾತಿಯ ಕಂದು ನಾಯಿ ಕಾಣಿಸಿಕೊಂಡಿದೆ. ಬಳಕೆದಾರರೊಬ್ಬರೊಂದಿಗೆ ಸಂವಾದ ನಡೆಸುವಾಗ ಈ ವಿಚಾರವನ್ನು ಮಸ್ಕ್ ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ. ಅವರ ಹೇಳಿಕೆಯೂ ಎಲ್ಲರ ಗಮನ ಸೆಳೆಯುತ್ತಿದೆ. ಟ್ವಿಟ್ಟರ್ ಬದಲಾವಣೆ ಕೇವಲ ವೆಬ್​ ಆವೃತ್ತಿಗೆ ಮಾತ್ರ ಸೀಮಿತವಾಗಿದೆ, ಮೊಬೈಲ್​ನಲ್ಲಿ ಪಕ್ಷಿಯ ಲೋಗೋನೆ ಕಾಣಿಸಲಿದೆ.