ಹುಬ್ಬಳ್ಳಿ: ಬಜೆಟ್ ಬಗ್ಗೆ ಈಗಾಗಲೇ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಗಿದೆ. ಬಜೆಟ್ ನಲ್ಲಿ ಉತ್ತರ ಕರ್ನಾಟಕ್ಕೆ ಆದ್ಯತೆ ನೀಡುವುದನ್ನು ಕಾದು ನೋಡಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಉಣಕಲ್ ನಲ್ಲಿರುವ ಹಳೇ ಸಿದ್ದಪ್ಪಜ್ಜನ ಮಠಕ್ಕೆ ರವಿವಾರ ಭೇಟಿ ನೀಡಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದಪ್ಪಜ್ಜ ನಮ್ಮ ಹುಬ್ಬಳ್ಳಿ ಆರಾಧ್ಯದೈವ. ಉಣಕಲ್ ನ ಪವಾಡ ಪುರುಷ. ನಾನು ಚಿಕ್ಕಂದಿನಿಂದ ಮಠಕ್ಕೆ ಬಂದು ಸಿದ್ದಪ್ಪಜ್ಜನ ಆಶೀರ್ವಾದ ಪಡೆದುಕೊಳ್ಳುತ್ತಿದ್ದೇನೆ. ಸಂಕ್ರಾಂತಿ ನಿಮಿತ್ತ ಇಂದು ಮಠಕ್ಕೆ ಭೇಟಿ ನೀಡಿದ್ದೇನೆ ಎಂದರು.
ನಾಡಿನ ಜನತೆಗೆ ಒಳ್ಳೆಯದಾಗಲಿ ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.