ಬಂಡೀಪುರದಲ್ಲಿ ಪ್ರಧಾನಿ ಸಫಾರಿ

Advertisement

ಬಂಡೀಪುರ ಹುಲಿ‌ ಸಂರಕ್ಷಿತ ಪ್ರದೇಶದಲ್ಲಿ ಪ್ರಧಾನಿ ನರೇಂದ್ರ ಮೋದಿ ಸಫಾರಿ ನಡೆಸಿದ್ದಾರೆ.
ಬೆಳಗ್ಗೆ 7.50ಕ್ಕೆ ತೆರೆದ ಜೀಪ್‌ನಲ್ಲಿ ಸುಮಾರು 2ಗಂಟೆಗಳ ಕಾಲ ಅವರು ಸಫಾರಿ ಮಾಡಿದರು. ಮೋದಿ ಅವರಿದ್ದ ವಾಹನದ ಜೊತೆಗೆ ಆಂಬುಲೆನ್ಸ್‌ ಸೇರಿದಂತೆ ಒಂಬತ್ತು ವಾಹನಗಳು ಸಾಗಿದ್ದವು.
ಇಲ್ಲಿಂದ ತಮಿಳುನಾಡಿನ ಮಧುಮಲೈ ಹುಲಿಸಂರಕ್ಷಿತ ಪ್ರದೇಶದ ತೆಪ್ಪಕಾಡು ಆನೆ ಶಿಬಿರಕ್ಕೆ ಮೋದಿ ತೆರಳಿದರು. ಬಳಿಕ ಏಷ್ಯಾದ ಪ್ರಥಮ ಆನೆ ಕ್ಯಾಂಪ್ ತೆಪ್ಪಕಾಡಿನಲ್ಲಿ ಮೋದಿ‌ ಎಲಿಫೆಂಟ್ ವಿಸ್ಪರರ್ಸ್ ಖ್ಯಾತಿಯ ಬೊಮ್ಮ ಮತ್ತು ಬೆಳ್ಳಿ ದಂಪತಿಯನ್ನು ಭೇಟಿಯಾದರು.