ಫ್ಲೈ ಓವರ್ ಕಾಮಗಾರಿ ವೇಳೆ ಎದೆ ಸೀಳಿದ ರಾಡ್‌: ಕಾರ್ಮಿಕನಿಗೆ ಗಂಭೀರ ಗಾಯ

ಹುಬ್ಬಳ್ಳಿ ರಾಡ್‌
Advertisement

ಹುಬ್ಬಳ್ಳಿ: ನಗರದಲ್ಲಿ ನಡೆಯುತ್ತಿರೋ ಫ್ಲೈ ಓವರ್ ಕಾಮಗಾರಿ ವೇಳೆಯಲ್ಲಿ ಅಂತಾರಾಜ್ಯ ಕಾರ್ಮಿಕನ ಎದೆಗೆ ಕಬ್ಬಿಣದ ರಾಡ್ ಚುಚ್ವಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಹುಬ್ಬಳ್ಳಿ ಹೊಸೂರು ಸರ್ಕಲ್ ಬಳಿಯಲ್ಲಿ ನಡೆಯುತ್ತಿರುವು ಫ್ಲೈ ಓವರ್ ಕಾಮಗಾರಿಯ ವೇಳೆಯಲ್ಲಿ ಫ್ಲೈ ಓವರ್ ಮೇಲಿಂದ ಕಬ್ಬಿಣದ ರಾಡ್ ಬಿದ್ದು ಯುವಕನ ಎದೆ ಸೀಳಿದ ಘಟನೆ ನಡೆದಿದೆ. ಕೊಲ್ಕತ್ತಾ ಮೂಲದ ಅಬ್ದುಲ್ ಗಾಪರ್ ಗಂಭೀರವಾಗಿ ಗಾಯಗೊಂಡಿದ್ದಾನೆ. ಸಹ ಕಾರ್ಮಿಕರು ಆತನನ್ನು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.