ಫೋಟೋಗಳನ್ನು ಕಳಿಸಿರುವ ಸನ್ನಿವೇಶ speaks otherwise

ರೋಹಿಣಿ
Advertisement

ಧಾರ್ಮಿಕ ದತ್ತಿ, ಮುಜರಾಯಿ ಇಲಾಖೆಯ ಆಯುಕ್ತರಾಗಿರುವ ರೋಹಿಣಿ ಸಿಂಧೂರಿ ವಿರುದ್ಧ ಸಮರ ಸಾರಿರುವ ಐಪಿಎಸ್ ಅಧಿಕಾರಿ ರೂಪಾ ಮೌಡ್ಗಿಲ್ ರೋಹಿಣಿ ಸಿಂಧೂರಿ ಅವರದ್ದು ಎನ್ನಲಾದ ಕೆಲ ಆಕ್ಷೇಪಾರ್ಹ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಜತೆಗೆ ತನಿಖಾ ಸಂಸ್ಥೆಗಳು ಕೂಡ ತನಿಖೆ ಮಾಡಬಹುದು ಎಂದು ಅವರು ಸವಾಲು ಹಾಕಿದ್ದಾರೆ.
ಫೇಸ್‌ಬುಕ್‌ನಲ್ಲಿ ಅವರು ರೋಹಿಣಿ ಸಿಂಧೂರಿ ಅವರ ಫೋಟೋ ಜತೆಗೆ ಬರೆದಿರುವ ಸಾಲುಗಳು ಯಥಾವತ್ತಾಗಿ ಈ ಕೆಳಗಿದೆ.
ಈ ರೀತಿಯ ಪಿಕ್ಚರ್ಸ್ normal ಅನ್ನಿಸಬಹುದು. ಆದರೆ, ಒಬ್ಬ ಮಹಿಳಾ ಐಎಎಸ್ ಅಧಿಕಾರಿ ಒಂದಲ್ಲ, ಎರಡಲ್ಲ ಮೂರು ಐಎಎಸ್ ಪುರುಷ ಅಧಿಕಾರಿಗಳಿಗೆ ಆಗಾಗ ಇವುಗಳನ್ನು ಹಾಗೂ ಈ ರೀತಿಯ ಅನೇಕ ಚಿತ್ರಗಳನ್ನು ಒಂದಾದ ಮೇಲೆ ಒಂದರಂತೆ ಕಳಿಸ್ತಾರೆ ಅಂದ್ರೆ ಅದಕ್ಕೆ ಏನರ್ಥ? ಇದು ಆಕೆಯ private matter ಆಗುವುದಿಲ್ಲ ಐಎಎಸ್ SERVICE CONDUCT RULES ಪ್ರಕಾರ ಅಪರಾಧ. ಈ ಚಿತ್ರಗಳ ನೈಜತೆ ಬಗ್ಗೆ ಯಾವುದೇ ತನಿಖಾ ಸಂಸ್ಥೆ ಕೂಡಾ investigate ಮಾಡಬಹುದು. ಸಲೂನ್ haircut chitra, ತಲೆದಿಂಬು ಇತ್ತು ಮಲಗಿ ತೆಗೆದಿರುವ ಚಿತ್ರ. Normal ಅನ್ನಿಸಬಹುದು ಕೆಲವರಿಗೆ. ಕಳಿಸಿರುವ ಸನ್ನಿವೇಶ speaks otherwise. ಎಂದು ಡಿ.ರೂಪಾ ಬರೆದುಕೊಂಡಿದ್ದಾರೆ.