ಪ್ಲೀಸ್‌ ಇನ್ನೊಂದು ಅವಕಾಶ ಕೊಡಿ…..!

Advertisement

ಪ್ಲೀಸ್‌ ನನಗೆ ಇನ್ನೊಂದು ಅವಕಾಶ ನೀಡಿ..! ಇದು ಟೆಸ್ಟ್‌ ಕ್ರಿಕೆಟ್‌ನಲ್ಲಿ ವೀರೇಂದ್ರ ಸೆಹ್ವಾಗ್‌ ನಂತರ ತ್ರಿಶತಕ ಬಾರಿಸಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದ ಕರ್ನಾಟಕದ ಕರುಣ್‌ ನಾಯರ್‌ ಅವರ ಮನವಿ.
ತ್ರಿಶತಕ ಬಾರಿಸಿದರೂ ರಾಷ್ಟ್ರ ಟೆಸ್ಟ್‌ ತಂಡದಲ್ಲಿ ಮರಳಿ ಸ್ಥಾನ ಪಡೆಯುವಲ್ಲಿ ವಿಫಲರಾಗಿರುವ ನಾಯರ್‌, ಟ್ವೀಟ್‌ ಮೂಲಕ ಅವಕಾಶಕ್ಕೆ ಮನವಿ ಮಾಡಿಕೊಂಡಿದ್ದಾರೆ.
ಐಪಿಎಲ್‌ನಲ್ಲಿ ನಿರೀಕ್ಷಿತ ಯಶ ಕಾಣದೇ ಹೋದ ಕರುಣ್‌ ಈಗ ಕರ್ನಾಟಕ ರಣಜಿ ತಂಡದಲ್ಲೂ ಸ್ಥಾನ ಪಡೆಯುವಲ್ಲಿ ವಿಫಲರಾಗಿದ್ದಾರೆ. 31 ವರುಷದ ಕರುಣ್‌ 6 ಟೆಸ್ಟ್‌ ಹಾಗೂ ಎರಡು ಏಕದಿನ ಪಂದ್ಯಗಳನ್ನು ಆಡಿದ್ದು, ಟೆಸ್ಟ್‌ ಕ್ರಿಕೆಟ್‌ನಲ್ಲಿ ಸರಾಸರಿ 62.33 ರಂತೆ ಒಟ್ಟು 374 ರನ್‌ ಸೇರಿದ್ದಾರೆ. 76 ಪ್ರಥಮ ದರ್ಜೆ ಕ್ರಿಕೆಟ್‌ ಪಂದ್ಯಗಳನ್ನು ಆಡಿರುವ ಕರುಣ್‌ ಸರಾಸರಿ 50.33 ರಂತೆ ಒಟ್ಟು 5436 ರನ್‌ ಗಳಿಸಿದ್ದಾರೆ. ಇವುಗಳಲ್ಲಿ 14 ಶತಕ ಹಾಗೂ 25 ಅರ್ಧ ಶತಕಗಳು ಸೇರಿವೆ.