ಪ್ರಾಧ್ಯಾಪಕಿಗೆ 21 ಲಕ್ಷ ಪಂಗನಾಮ ಹಾಕಿದ ಆನ್‌ಲೈನ್ ಗೆಳತಿ!

online Friend
Advertisement

ಹುಬ್ಬಳ್ಳಿ: ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿ ಸ್ನೇಹಿತೆಯ ಸೋಗಿನಲ್ಲಿ ಧಾರವಾಡ ಮೂಲದ ನಿವೃತ್ತ ಪ್ರಾಧ್ಯಾಪಕಿಗೆ 21 ಲಕ್ಷ ಪಂಗನಾಮ ಹಾಕಿದ್ದಾಳೆ.
ಪ್ರಾಧ್ಯಾಪಕಿಗೆ ಅಂಜಲಿ ಎಂದು ಹೇಳಿಕೊಂಡ ಮಹಿಳೆ ಸಾಮಾಜಿಕ ಜಾಲತಾಣದಲ್ಲಿ ಪರಿಚಯವಾಗಿದ್ದಾಳೆ. ಆಪ್ತ ಸ್ನೇಹಿತೆ ಸೋಗಿನಲ್ಲಿ ಒಡನಾಟ ಬೆಳೆಸಿಕೊಂಡಿದ್ದು, ವಾಟ್ಸ್ ಅಪ್‌ನಲ್ಲಿ ಪ್ರಾಧ್ಯಾಪಕಿಗೆ ತನ್ನ ದೇಹದ ಖಾಸಗಿ ಭಾಗದ ಚಿತ್ರಗಳನ್ನು ಕಳಿಸಿದ್ದಾಳೆ. ಬಳಿಕ ಪ್ರಾಧ್ಯಾಪಕಿಯ ಚಿತ್ರಗಳನ್ನು ತರಿಸಿಕೊಂಡಿದ್ದಾಳೆ. ಆ ಮೇಲೆ ವಿಡಿಯೋ ಕಾಲ್ ಮಾಡಿಸಿಕೊಂಡ ವಂಚಕಿ ಸ್ಕ್ರಿನ್ ರಿಕಾರ್ಡ್ ಮಾಡಿದ್ದಾಳೆ. 3 ಲಕ್ಷ ಕೊಡದೇ ಇದ್ದರೆ ಸಾಮಾಜಿಕ ಜಾಲತಾಣದಲ್ಲಿ ನಿನ್ನ ಚಿತ್ರ ಅಪ್ ಲೋಡ್ ಮಾಡುವುದಾಗಿ ಬೆದರಿಕೆ ಹಾಕಿದ್ದಾಳೆ. ಬಳಿಕ ಒಬ್ಬ ವ್ಯಕ್ತಿಯ ಮೂಲಕ ಕರೆ ಮಾಡಿಸಿ ಸೈಬರ್ ಅಧಿಕಾರಿ ಎಂದು ಹೇಳಿಸಿದ್ದಾಳೆ. ಈ ಅಧಿಕಾರಿ ತನಗೆ ಪರಿಚಯವಿದ್ದು ಆತನಿಗೆ 5 ಲಕ್ಷ ಕೊಟ್ಟರೆ ಚಿತ್ರ ಅಪ್ ಲೋಡ್ ಮಾಡಲ್ಲ ಎಂದು ಹೇಳಿ ಮತ್ತೆ ಹಣ ಪೀಕಿದ್ದು, ಹೀಗೆ ಹಂತ ಹಂತವಾಗಿ ಒಟ್ಟು 21 ಲಕ್ಷ ರೂ.ಗಳನ್ನು ಪ್ರಾಧ್ಯಾಪಕಿಯ ಖಾತೆಯಿಂದ ವಂಚಕರ ತಂಡ ವರ್ಗಾಯಿಸಿಕೊಂಡಿದೆ. ಈ ಬಗ್ಗೆ ನಿವೃತ್ತ ಪ್ರಾಧ್ಯಾಪಕಿ ಸೈಬರ್ ಕ್ರೈಂಗೆ ದೂರು ನೀಡಿದ್ದಾರೆ.