ಪ್ರವಾಹಕ್ಕೆ ಸಿಲುಕಿದ್ದ 6 ಜನರ ರಕ್ಷಣೆ

Advertisement

ಹುಬ್ಬಳ್ಳಿ : ಕಡಪಟ್ಟಿ- ಹಳ್ಯಾಳ ನಡುವಿನ ಹಳ್ಳದ ಸೇತುವೆ ಮೇಲೆ ಹೋಗುವಾಗ ಪ್ರವಾಹಕ್ಕೆ ಸಿಲುಕಿದ್ದ 6 ಜನರನ್ನು ರಕ್ಷಣೆ ಮಾಡಲಾಗಿದೆ. 6 ಜನರೂ ಕಡಪಟ್ಟಿ ಗ್ರಾಮದವರಾಗಿದ್ದಾರೆ ಎಂದು ತಹಶೀಲ್ದಾರ ಪ್ರಕಾಶ ನಾಶಿ ತಿಳಿಸಿದ್ದಾರೆ.
ಅರೂ ಜನರೂ ಕೆಲಸದ ಮೇಲೆ ಹಳ್ಯಾಳಕ್ಕೆ ಬಂದು ಹೋಗುವಾಗ ಪ್ರವಾಹಕ್ಕೆ ಸಿಲುಕಿದ್ದರು. ರಾತ್ರಿ 1.30ರ ಹೊತ್ತಿಗೆ ಅಗ್ನಿ ಶಾಮಕ ದಳ, ಗ್ರಾಮಸ್ಥರ ಸಹಕಾರದಿಂದ ರಕ್ಷಣೆ ಮಾಡಲಾಗಿದೆ ಎಂದು ಹೇಳಿದ್ದಾರೆ.

ಕಿರೇಸೂರು ಗ್ರಾಮದಲ್ಲಿ ಮಳೆ ನೀರು ಮನೆಗೆ ನುಗ್ಗಿ ಜನ ತೊಂದರೆಗೆ ಸಿಲುಕಿದ್ದಾರೆ.
ಗ್ರಾಮಸ್ಥರಿಗೆ ಉಪಹಾರದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ.
ತಾಲ್ಲೂಕಿನಲ್ಲಿ ಶಾಲೆಗಳಿಗೆ ರಜೆ ಘೋಷಣೆ ಮಾಡಿಲ್ಲ ಎಂದು ತಿಳಿಸಿದ್ದಾರೆ