ಧಾರವಾಡ: ಅಪರಿಚಿತ ವ್ಯಕ್ತಿಯಿಂದ ಜೀವ ಬೆದರಿಕೆ ಕರೆ ಬಂದಿದೆ. ಅಲ್ಲದೇ ವಾಟ್ಸ್ಆ್ಯಪ್ನಲ್ಲಿ ಅವಾಚ್ಯ ಶಬ್ದಗಳಿಂದ ಅಪರಿಚಿತ ವ್ಯಕ್ತಿ ನಿಂದನೆ ಮಾಡಿದ್ದಾನೆ ಎಂದು ಆರೋಪಿಸಿ ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಧಾರವಾಡ ಉಪನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ನಿನ್ನ ಪಾಡಿಗೆ ನೀನಿರು, ನಮ್ಮ ತಂಟೆಗೆ ಬರಬೇಡ ಎಂದು ಮುತಾಲಿಕ್ ಅವರಿಗೆ ವ್ಯಕ್ತಿಯೋರ್ವ ಬೆದರಿಕೆ ಹಾಕಿದ್ದಾನೆ. ಈ ಹಿಂದೆ ಮಸಿ ಬಳಸಿಕೊಂಡಿರುವೆ, ಇನ್ನು ಮುಂದಾದರೂ ನಮ್ಮ ಸಮುದಾಯದ ಬಗ್ಗೆ ಮಾತನಾಡಬೇಡ. ನಮ್ಮ ಸಮುದಾಯದ ವಿರುದ್ಧ ಮಾತನಾಡೋಕೆ ನೀನ್ಯಾರು ಎಂದು ಪ್ರಶ್ನಿಸಿದ್ದಾನಂತೆ. ವಾಯ್ಸ್ ಮೇಸೆಜ್ನಲ್ಲಿ ಅಶ್ಲೀಲ ಪದಗಳನ್ನು ಬಳಕೆ ಮಾಡಿ ನಿಂದನೆ ಮಾಡಿದ್ದಾನೆ ಎಂದು ಮುತಾಲಿಕ್ ಆರೋಪಿಸಿದ್ದಾರೆ.