ಪ್ರಧಾನಿ ಸಫಾರಿ ಮಾಡಿದರೆ ಜನ ವೋಟ್‌ ಒತ್ತಿ ಬಿಡ್ತಾರಾ?

kumarswami
Advertisement

ಬೆಂಗಳೂರು: ಪ್ರಧಾನಿ ಮೋದಿ ಬಂಡೀಪುರಕ್ಕೆ ಬಂದು ಸಫಾರಿ ಮಾಡಿದರೆ ತಕ್ಷಣ ಜನ ವೋಟು ಒತ್ತಿ ಬಿಡ್ತಾರಾ ಎಂದು ಮಾಜಿ ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇವಲ ಸೂಟು ಬೂಟು, ಕೂಲಿಂಗ್‌ ಗ್ಲಾಸ್ ಹಾಕಿಕೊಂಡು‌ ಬಂದರೆ ಏನು ಪ್ರಯೋಜನ ಎಂದು ಪ್ರಶ್ನಿಸಿದ್ದಾರೆ.
ವನ್ಯಜೀವಿಗಳನ್ನು ರಕ್ಷಣೆ ಮಾಡಬೇಕು. ಆದರೆ ವನ್ಯ ಜೀವಿಗಳಿಂದ ಎಷ್ಟು ದಾಳಿ ಆಗಿದೆ. ದಾಳಿಗೆ ಒಳಗಾದ ಕುಂಟುಂಬಗಳ ಪರಿಸ್ಥಿತಿ ಏನಾಗಿದೆ ಎನ್ನುವುದನ್ನು ಇವರಿಗೆ ಗೊತ್ತಿದೆಯೇ? ಅವರ ಕುಟುಂಬಕ್ಕೆ ಭೇಟಿ ಕೊಟ್ಟಿದ್ದಾರಾ ಎಂದು ಕಿಡಿಕಾರಿದ್ದಾರೆ.
ಕೋವಿಡ್ ಸಂಕಷ್ಟ, ಪ್ರವಾಹ‌ ಬಂದಾಗ ಪ್ರಧಾನಿ ಬರಲಿಲ್ಲ. ಈಗ ಚುನಾವಣೆ ಹೊತ್ತಿನಲ್ಲಿ ಸಫಾರಿಗೆ ಬಂದಿದ್ದಾರೆ. ನಾಡಿನ ಜನ ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದಿದ್ದಾರೆ.