ದಾವಣಗೆರೆ: ವಿಜಯಸಂಕಲ್ಪ ಮಹಾಸಂಗಮ ಸಮಾರಂಭದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಪ್ರಧಾನಿ ನರೇಂದ್ರ ಮೋದಿಯವರನ್ನು ಹಾಡಿ ಹೊಗಳಿದ್ದಾರೆ.
ಕಾಂಗ್ರೆಸ್ಕಾಲದಲ್ಲಿ ಆಗದ್ದನ್ನು ಮೋದಿ ಕಡಿಮೆ ಸಮಯದಲ್ಲಿ ಮಾಡಿದ್ದಾರೆ. ಮೋದಿ ಅವರನ್ನು ಸುಮ್ಮನೆ ದೇಶದ ನಾಯಕ ಎನ್ನುತ್ತಿಲ್ಲ. ದೇಶ-ವಿದೇಶದಲ್ಲಿ ಮೋದಿ ಅವರನ್ನು ಹೊಗಳಿ ಕೊಂಡಾಡುತ್ತಾರೆ. ಮೋದಿ ಅವರ ಕೈಯನ್ನು ಬಲಪಡಿಸಿ. ಮುಂದಿನ ಚುನಾವಣೆಯಲ್ಲಿ ಮತ್ತೆ ಕಮಲ ಅರಳುವಂತೆ ಮಾಡಿ ಎಂದು ಮನವಿ ಮಾಡಿದರು.