ಶಿವಮೊಗ್ಗ: ಶಿವಮೊಗ್ಗದ ಸುರೇಶ ದಂಪತಿಗಳು ಮನ ಕೀ ಬಾತ್‌ನಲ್ಲಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಶ್ಲಾಘನೆಗೆ ಒಳಗಾಗಿದ್ದಾರೆ,
ಕರ್ನಾಟಕದ ಓರ್ವ ದಂಪತಿ ಅಡಿಕೆ ನಾರು ಅಥವಾ ಹಾಳೆಯಿಂದ ತಯಾರಿಸಲಾದ ಅನೇಕ ವಿಶಿಷ್ಟ ಉತ್ಪನ್ನಗಳನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಗೆ ತಲುಪಿಸುತ್ತಿದ್ದಾರೆ; ಈ ದಂಪತಿಯೆಂದರೆ ಕರ್ನಾಟಕದ ಶಿವಮೊಗ್ಗ ನಿವಾಸಿಗಳಾದ ಸುರೇಶ್ ಮತ್ತು ಅವರ ಪತ್ನಿ ಮೈಥಿಲಿ ಜೋಡಿ ನಮ್ಮ ನೈಸರ್ಗಿಕ ಸಂಪನ್ಮೂಲಗಳ ವಿವೇಚನಾಯುಕ್ತ ಬಳಕೆಯು ಸುಸ್ಥಿರ ಭವಿಷ್ಯಕ್ಕೆ ದಾರಿ ಮಾಡಿಕೊಡುತ್ತದೆ ಎಂಬುದನ್ನು ಈ ದಂಪತಿ ನಿರೂಪಿಸಿದ್ದಾರೆ ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ತಮ್ಮ ಮನ್ ಕೀ ಬಾತ್‌ನಲ್ಲಿ ಹೇಳಿದ್ದಾರೆ.