ಹುಬ್ಬಳ್ಳಿ: ಇಲ್ಲಿನ ರೈಲ್ವೆ ಮೈದಾನದಲ್ಲಿ ರಾಷ್ಟ್ರೀಯ ಯುವ ಜನೋತ್ಸವ ಉದ್ಘಾಟನೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಜ. ೧೨ರಂದು ಆಗಮಿಸುತ್ತಿದ್ದು, ಈ ಹಿನ್ನೆಲೆಯಲ್ಲಿ ಜ. ೧೧ ಮತ್ತು ೧೨ರಂದು ನಿಗದಿತ ಸಮಯದಲ್ಲಿ ಕೆಲ ನಿರ್ದಿಷ್ಟ ಮಾರ್ಗಗಳಲ್ಲಿ ವಾಹನ ಸಂಚಾರ ಮಾರ್ಗವನ್ನು ಬದಲಾವಣೆ ಮಾಡಿ ಹು-ಧಾ ಮಹಾನಗರ ಪೊಲೀಸ್ ಆಯುಕ್ತ ರಮಣ ಗುಪ್ತಾ ಆದೇಶ ಹೊರಡಿಸಿದ್ದು, ಸಾರ್ವಜನಿಕರು ಸಹಕರಿಸಲು ಮನವಿ ಮಾಡಿದ್ದಾರೆ.
ಸಮಾವೇಶಕ್ಕೆ ಬರುವ ವಾಹನಗಳು ಮಾತ್ರ
ನವಲಗುಂದ ಕಡೆಯಿಂದ ಬರುವ ಬಸ್‌ಗಳು ಕೆ.ಎಚ್ ಪಾಟೀಲ್ ರಸ್ತೆ, ಶೃಂಗಾರ ಕ್ರಾಸ್‌ನಲ್ಲಿ ಜನರನ್ನು ಇಳಿಸಬೇಕು. ಸರ್ವೋದಯ ಸರ್ಕಲ್ ಶೃಂಗಾರ ಕ್ರಾಸ್, ಸೇಂಟ್ ಎಂಡ್ರಿಯೋ ಸ್ಕೂಲ್, ಆರ್‌ಪಿಎಫ್ ಕ್ರಾಸ್ ಮೂಲಕ ವಿನೋಭಾ ನಗರ ಮೈದಾನಕ್ಕೆ ಪಾರ್ಕಿಂಗ್ ಇದೆ.
ಗದಗ ಕಡೆಯಿಂದ ಬರುವ ಬಸ್‌ಗಳು ಗದಗ ಅಂಡರ ಬ್ರಿಡ್ಜ್ ಅಂಬೇಡ್ಕರ್ ಮೂರ್ತಿಯ ಸರ್ಕಲ್‌ನಲ್ಲಿ ಜನರನ್ನು ಇಳಿಸಬೇಕು. ಅಂಡರ್ ಬ್ರಿಡ್ಜ್ ಮೂಲಕ ಅಂಬೇಡ್ಕರ್ ಪುತ್ಥಳಿ ಸುತ್ತುವರೆದು ಗದಗ ರಸ್ತೆಯ ಚಿಲ್ಲಿ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.
ಗಬ್ಬೂರ ರೋಡ ಕಡೆಯಿಂದ ಬರುವ ಬಸ್‌ಗಳು ಪೊಲೀಸ್ ಕ್ವಾಟರ್ಸ್ ಹತ್ತಿರ ಜನರನ್ನು ಇಳಿಸಬೇಕು. ಬಂಕಾಪುರ ಚೌಕ, ಕಮರಿಪೇಟೆ, ಮಿರ್ಜಾನಕರ ಪೆಟ್ರೋಲ್ ಪಂಪ್ ಸುತ್ತುವರೆದು ಗಿರಣಿಚಾಳ ಮೈದಾನ ಅಥವಾ ಎಂ.ಟಿ. ಮಿಲ್ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.
ಕಾರವಾರ ರೋಡ ಕಡೆಯಿಂದ ಬರುವ ಬಸ್‌ಗಳು ಇಂದಿರಾ ಗ್ಲಾಸ್ ಹೌಸ್ ಭಾವಿ ಹತ್ತಿರ ಜನರನ್ನು ಇಳಿಸಬೇಕು. ಎಂ.ಟಿ. ಮಿಲ್ಲ್, ಗ್ಲಾಸ್ ಹೌಸ್ ಹತ್ತಿರದ ಭಾವಿ ಮೈದಾನದಲ್ಲಿ ಪಾರ್ಕಿಂಗ್ ಮಾಡಬೇಕು.
ಧಾರವಾಡ ನಗರ ಕಡೆಯಿಂದ ಬರುವ ಬಸ್‌ಗಳು ಹಳೇಬಸ್ ನಿಲ್ದಾಣದ ಮುಂದೆ ಜನರನ್ನು ಇಳಿಸಬೇಕು. ನವನಗರ, ಬಿವಿಬಿ, ಹೊಸೂರು, ಲಕ್ಷ್ಮೀ ವೇ ಬ್ರಿಡ್ಜ್, ಗ್ಲಾಸ್‌ಹೌಸ್ ಬಾವಿ ಮೂಲಕ ಹಾಯ್ದು ತೆರಳಿ ರಾಯ್ಕರ ಮೈದಾನದಲ್ಲಿ ಪಾರ್ಕಿಂಗ್ ಮಾಡಬಹುದು.
ಈ ಮಾರ್ಗ ಸಂಪೂರ್ಣ ನಿಷೇಧ
ಜ.೧೧ ಮತ್ತು ೧೨ ರಂದು ಮಧ್ಯಾಹ್ನ ೧ ರಿಂದ ಸಂಜೆ ೭ ಗಂಟೆಯವರೆಗೆ ಗೋಕುಲ ರಸ್ತೆಯ ವಾಯವ್ಯ ಸಾರಿಗೆ ಸಂಸ್ಥೆಯ ಗ್ರಾಮೀಣ ಡಿಪೋ (ಮಫಿಷಿಯಲ್ ಡಿಪೋ), ಸಿದ್ದೇಶ್ವರ ಪಾರ್ಕ್, ಶಿರೂರಪಾರ್ಕ್, ಕಿಮ್ಸ್ ಮುಖ್ಯ ರಸ್ತೆ, ಹೊಸೂರ ರಸ್ತೆ, ಭಗತ್‌ಸಿಂಗ್ ಸರ್ಕಲ್, ಪ್ರವಾಸಿ ಮಂದಿರ ಮಾರ್ಗ, ಬಾಳಿಗಾ ಕ್ರಾಸ್, ದೇಸಾಯಿ ಕ್ರಾಸ್ ಯುವಜನೋತ್ಸವ ಕಾರ್ಯಕ್ರಮ ಸ್ಥಳದವರೆಗೆ ವಾಹನಗಳ ಸಂಚಾರವನ್ನು ರೈಲ್ವೆ ಮೈದಾನದವರೆಗೆ ನಿಷೇಧಿಸಲಾಗಿದೆ.
ಸಾರ್ವಜನಿಕ ಬಸ್‌ಗಳಿಗೆ ಮಾರ್ಗ
ಕಾರವಾರ ಕಡೆಯಿಂದ ಬರುವ ಬಸ್‌ಗಳಿಗೆ ನಗರದ ಒಳಗಡೆ ಪ್ರವೇಶ ನಿಷೇಧಿಸಲಾಗಿದೆ. ದೂರ ಪ್ರಯಾಣ ಬಸ್‌ಗಳು ರಿಂಗ್ ರೋಡ ಹಾಗೂ ಬೈಪಾಸ್ ಮೂಲಕ ಸಂಚರಿಸಬೇಕು.
ಬೆಂಗಳೂರು ಕಡೆಯಿಂದ ಬರುವ ಬಸ್‌ಗಳು ಗಬ್ಬೂರು ಹತ್ತಿರ ತಾತ್ಕಾಲಿಕ ನಿಲುಗಡೆ ವ್ಯವಸ್ಥೆ ಮಾಡಿದೆ. ಹಾಗೆಯೇ ಗದಗ ರೋಡ್ ಕಡೆಯಿಂದ ಬರುವ ಬಸ್‌ಗಳಿಗೆ ರೈಲ್ವೆ ಲೋಕೊ ಶೆಡ್ ಹತ್ತಿರ ತಾತ್ಕಾಲಿಕ ನಿಲುಗಡೆ ಮಾಡಿದ್ದು, ರಿಂಗ್ ರೋಡ್ ಬೈಪಾಸ್ ಮೂಲಕ ಸಂಚರಿಸಬೇಕು.
ನವಲಗುಂದ ಕಡೆಯಿಂದ ಬರುವ ಬಸ್‌ಗಳು ಆಕ್ಸ್ಫರ್ಡ್ ಕಾಲೇಜು ಹತ್ತಿರ ನಿಲುಗಡೆ ಮಾಡಬೇಕು. ರಿಂಗ್ ರೋಡ ಹಾಗೂ ಬೈಪಾಸ್ ಮೂಲಕ ಸಂಚರಿಸಬೇಕು. ಧಾರವಾಡ ಕಡೆಯಿಂದ ಬರುವ ಬಸ್‌ಗಳು ತಾರಿಹಾಳ ಬ್ರಿಡ್ಜ್ ಹತ್ತಿರ ನಿಲುಗಡೆ ಮಾಡಿ ಬೈಪಾಸ್ ಮೂಲಕ ಸಂಚರಿಸಬೇಕು.
ಹುಬ್ಬಳ್ಳಿ-ಧಾರವಾಡ ನಗರದ ಮಧ್ಯೆ ಸಂಚರಿಸುವ ಚಿಗರಿ, ಬೇಂದ್ರೆ ಬಸ್‌ಗಳು, ನಗರ ಸಾರಿಗೆ ಬಸ್‌ಗಳು ಧಾರವಾಡ ಕಡೆಯಿಂದ ಬಂದು ಕಿಮ್ಸ್ ಆಸ್ಪತ್ರೆಯ ಒಳಗಡೆ ಹೋಗಿ ಟರ್ನ್ ಮಾಡಿಕೊಂಡು ಮರಳಿ ಧಾರವಾಡ ಕಡೆಗೆ ಹೋಗಬೇಕು.
ಇತರೆ ಹಾಗೂ ಭಾರಿ ವಾಹನಗಳ ಸಂಚಾರ ಮಾರ್ಗ
ಧಾರವಾಡದಿಂದ ಬರುವ ಲಘು ವಾಹಗಳು ಪ್ರೆಸಿಡೆಂಟ್ ಹೋಟೆಲ್ ಮೂಲಕ ಸಾಯಿನಗರ, ಜೆ.ಕೆ. ಸ್ಕೂಲ್, ಗೋಪನಕೊಪ್ಪ ಮೂಲಕ ಕೇಶ್ವಾಪುರ ಅಥವಾ ಕುಸುಗಲ್ ಮೂಲಕ ಹಾಯ್ದು ಹೋಗಬೇಕು.
ಧಾರವಾಡದಿಂದ ಬರುವ ಭಾರಿ ವಾಹನಗಳು ನವನಗರ ಒಳಗೆ ಹಾಯ್ದು, ಗಾಮನಗಟ್ಟಿ ಇಂಡಸ್ಟಿçಯಲ್ ಏರಿಯಾದಲ್ಲಿ ಹಾಯ್ದು ತಾರೀಹಾಳ ಬೈಪಾಸ್ ಸೇರಬೇಕು.
ನವಲಗುಂದ, ಗದಗ ಕಡೆಯಿಂದ ಬರುವ ಭಾರಿ ವಾಹನಗಳಿಗೆ ನಗರದಲ್ಲಿ ಸಂಚಾರ ನಿಷೇಧಿಸಿದ್ದು, ರಿಂಗ್ ರೋಡ ಮೂಲಕ ಸಂಚರಿಸಬೇಕು.