ಪ್ರದೇಶ ಸಮಾಚಾರ ಬೆಂಗಳೂರಿಗೆ ಸ್ಥಳಾಂತರ ಬೇಡ: ಹೋರಾಟ ಅನಿವಾರ್ಯ

Advertisement

ಧಾರವಾಡ: ಅಧಿಕಾರ ವಿಕೇಂದ್ರೀಕರಣ ಆಗಬೇಕೆ ಹೊರತು ಕೇಂದ್ರೀಕರಣ ಆಗಬಾರದು. ಬಿಜೆಪಿ ಸರಕಾರದ ಅವಧಿಯಲ್ಲಿ ಇದು ಆಗುತ್ತಿದೆ. ಇದು ಸಲ್ಲದು. ಕೂಡಲೇ ಧಾರವಾಡ ಆಕಾಶವಾಣಿ ಸದೃಢಗೊಳಿಸುವ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕು. ಇಲ್ಲದಿದ್ದರೆ ಹೋರಾಟ ಅನಿವಾರ್ಯ…
ಗುರುವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಕರ್ನಾಟಕ ವಿದ್ಯಾವರ್ಧಕ ಸಂಘ ಈ ರೀತಿಯ ಖಡಕ್ ಸಂದೇಶವನ್ನು ಸರಕಾರಕ್ಕೆ ನೀಡಿತು.
ಪ್ರಾದೇಶಿಕ ಸಮಾಚಾರ ಹೆಸರೇ ಸೂಚಿಸುವಂತೆ ಈ ಭಾಗದ ಸುದ್ದಿ ಭಾಷೆಯ ಸೊಗಡು ಪ್ರದೇಶ ಸಮಾಚಾರದಲ್ಲಿರುತ್ತದೆ. ಆದರೆ, ಬೆಂಗಳೂರಿಗೆ ಹೋದರೆ ಅದು ಆಗದು. ಇಲ್ಲಿ ವರದಿಗಾರರನ್ನು ನೇಮಕ ಮಾಡಿ ಈ ಭಾಗದ ಸುದ್ದಿಯನ್ನು ನೀಡಬೇಕು.
ಬೆಂಗಳೂರಿಗಿಂತ ಹೆಚ್ಚು ಧಾರವಾಡ ಆಕಾಶವಾಣಿ ಕೇಂದ್ರ ಆಕ್ಟಿವ್ ಆಗಿ ಕೆಲಸ ಮಾಡುತ್ತಿದೆ. ಇದನ್ನು ಸದೃಢಗೊಳಿಸಬೇಕು ಎಂದು ಒತ್ತಾಯಿಸಿದರು.
ಒಂದು ವೇಳೆ ಸರಕಾರ ತನ್ನ ನಿರ್ಧಾರ ಬದಲಿಸದಿದ್ದರೆ ಗೋಕಾಕ ಚಳವಳಿ ಮಾದರಿಯ ಹೋರಾಟ ನಡೆಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿತು.
ಸಂಘದ ಅಧ್ಯಕ್ಷ ಚಂದ್ರಕಾಂತ ಬೆಲ್ಲದ, ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ, ಪ್ರೊ. ಮಾಲತಿ ಪಟ್ಟಣಶೆಟ್ಟಿ, ವೆಂಕಟೇಶ ಮಾಚಕನೂರ, ಬಾಳಣ್ಣ ಶೀಗಿಹಳ್ಳಿ, ಶಂಕರ ಹಲಗತ್ತಿ, ನಿಂಗಣ್ಣ ಕುಂಟಿ ಸೇರಿದಂತೆ ಇತರರು ಇದ್ದರು.