ಪ್ರಗತಿ ‌ಪರಿಶೀಲನಾ ಸಭೆ: ಫುಲ್‌ ಗರಂ ಆದ ಡಿಸಿಸಿ ಬ್ಯಾಂಕ್ ಅಧ್ಯಕ್ಷ

ಡಿಸಿಸಿ ಬ್ಯಾಂಕ್
Advertisement

ಕಲಬುರಗಿ: ಜಿಲ್ಲಾ ಉಸ್ತುವಾರಿ ಸಚಿವ ಮುರುಗೇಶ ನಿರಾಣಿ ಅಧ್ಯಕ್ಷತೆಯಲ್ಲಿ ನಡೆದ ಪ್ರಗತಿ ‌ಪರಿಶೀಲನಾ ಸಭೆಯಲ್ಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ ಪಾಟೀಲ್ ತೇಲ್ಕೂರ ಅವರು ಫುಲ್‌ ಗರಂ ಆಗಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ಸಕ್ರೇಪ್ ಗೌಡ ಬಿರಾದಾರಗೆ ಕ್ಲಾಸ್ ತೆಗೆದುಕೊಂಡರು.‌
ಸೇಡಂ ಕ್ಷೇತ್ರದ ವ್ಯಾಪ್ತಿಯ ಚಿಂಚೋಳಿ ತಾಲೂಕಿನ‌ ಹಳ್ಳಿಯೊಂದರಲ್ಲಿ ಖಾಸಗಿ ಶಾಲೆ ಕಟ್ಟಡಕ್ಕೆ ಅಗ್ನಿಶಾಮಕ ದಳದ ಎನ್‌ಓಸಿ ಬಗ್ಗೆ ಅನುಮತಿ ನೀಡಲು ಐದು ಸಾವಿರ ರೂ. ಶುಲ್ಕಕ್ಕೆ ಐದು ಲಕ್ಷ ರೂ. ಬೇಡಿಕೆ ಇಟ್ಟಿದಲ್ಲದೆ, ಶಿಕ್ಷಣ ಇಲಾಖೆಯ ಅಧೀನ ಅಧಿಕಾರಿಯೊಬ್ಬರು ಎಂಎಲ್‌ಎ‌ ಮತ್ತು ಸಚಿವರ ಹತ್ತಿರ ಹೋಗುತ್ತಿರಾ ಎಂದಿದ್ದಕ್ಕೆ ಫುಲ್ ಗರಂ ಆದರು.