ಪಿಎಸ್ಐನನ್ನು ಎಳೆದಾಡಿದ ಜೆಡಿಎಸ್ ಕಾರ್ಯಕರ್ತರು

ಪಿಎಸ್‌ಐ
Advertisement

ಸಿಂಧನೂರು : ನಗರದ ಕಲಾ ರಂಗಮಂದಿರದಲ್ಲಿ ಕನ್ನಡದ ಚಿತ್ರನಟ ಪುನೀತ್ ರಾಜ್‍ಕುಮಾರ್ ಅವರ ಪುತ್ಥಳಿ ಪ್ರತಿಷ್ಠಾಪನೆಗಾಗಿ ಪುನೀತ್ ರಾಜಕುಮಾರರವರ ಮೂರ್ತಿ ಮೆರವಣಿಗೆ ಸಂದರ್ಭದಲ್ಲಿ ಜೆಡಿಎಸ್ ಕಾರ್ಯಕರ್ತರ ಪೊಲೀಸರ ಮಧ್ಯೆ ವಾಗ್ವಾದ ನಡೆದಿದ್ದು. ಗ್ರಾಮೀಣ ಪಿಎಸ್ಐ ಮಣಿಕಂಠ ಅವರನ್ನು ಜೆಡಿಎಸ್ ಶಾಸಕರ ಪುತ್ರ ಹಾಗೂ ಕಾರ್ಯಕರ್ತರು ಎಳೆದಾಡಿದ ಘಟನೆ ಮಂಗಳವಾರ ನಡೆದಿದೆ.
ಪುನೀತ್ ರಾಜ್‍ಕುಮಾರ್ ಮೂರ್ತಿ ಪ್ರತಿಷ್ಠಾಪಿಸಲು ಶಾಸಕನ ಪುತ್ರ ಅಭಿಷೇಕ ನಾಡಗೌಡ ಸೇರಿದಂತೆ ಅನೇಕ ಯುವಕರು ನಗರದ ಎಪಿಎಂಸಿ ಗಣೇಶ್ ದೇವಸ್ಥಾನದಿಂದ ಮೆರವಣಿಗೆ ನಡೆಸಲು ಮುಂದಾದಾಗ ಪೊಲೀಸರ ಮತ್ತು ಯುವಕರ ನಡುವೆ ವಾಗ್ವಾದ ನಡೆದು ನಗರ್ ಟ್ರಾಫಿಕ್ ಪೊಲೀಸ್ ಠಾಣೆ ಪಿಎಸ್ಐ ಮಣಿಕಂಠ ಅವರನ್ನು ಯುವಕರು ಎಳೆದಾಡಿದ್ದಾರೆ. ಘಟನೆ ಸಂಬಂಧಿಸಿದಂತೆ ಸುಮಾರು ಏಳೆಂಟು ಯುವಕರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.