ಪಿಎಫ್‌ಐ ನಿಷೇಧ ಸ್ವಾಗತಾರ್ಹ: ಎನ್.ರವಿಕುಮಾರ್

ಎನ್.ರವಿಕುಮಾರ್
Advertisement

ಕಲಬುರಗಿ: ದೇಶಾದ್ಯಂತ ದೇಶದ್ರೋಹಿ ಚಟುವಟಿಕೆಗಳು ನಡೆಸುವಂತಹ ಪಿಎಫ್‌ಐ ಸಂಘಟನೆಯನ್ನು ಐದು ವರ್ಷಗಳ ಕಾಲ ನಿಷೇಧಿಸಿದ್ದು, ಕೇಂದ್ರ ಸರ್ಕಾರದ ತೀರ್ಮಾನ ಸ್ವಾಗತಾರ್ಹಕರ ಸಂಗತಿ ಎಂದು ರಾಜ್ಯ ಪ್ರಧಾನ ಕಾರ್ಯದರ್ಶಿ, ವಿಧಾನ ಪರಿಷತ್ ಸದಸ್ಯ ಎನ್. ರವಿಕುಮಾರ್ ಹೇಳಿದ್ದಾರೆ.
ಅವರು ಬುಧವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಪಿಎಫ್‌ಐ ಸಂಘಟನೆಯನ್ನು ನಿಷೇಧ ಮಾಡಲು ಕೆಲವರು ವಿರೋಧ ವ್ಯಕ್ತಪಡಿಸಿದ್ದು, ಪಿಎಫ್‌ಐ ಒಂದು ಟೆರರಿಸ್ಟ್ ಸಂಘಟನೆ, ದೇಶದಲ್ಲಿ ವಿದ್ವಂಸಕ ಕೃತ್ಯಗಳನ್ನು ಎಸಗಲು ಮುಂದಾಗಿತ್ತು ಎಂದರು.
ಪಿಎಫ್‌ಐ ನಿಷೇಧ ಮಾಡಲು ಸರ್ಕಾರಕ್ಕೆ ಸಾಕಷ್ಟು ಪುರಾವೆಗಳು ಸಿಕ್ಕಿದ್ದು, ಸಮಾಜದಲ್ಲಿ ಈ ಸಂಘಟನೆಯಿಂದ ಶಾಂತಿ ಕದಡುವ ಕೆಲಸ, ದ್ವೇಷ ಹುಟ್ಟಿಸುವ ಕಾರ್ಯ ನಡೆದಿತ್ತು. ಆದರೆ, ಎಸ್‌ಡಿಪಿಐ ಒಂದು ರಾಜಕೀಯ ಪಕ್ಷ, ಅದು ರಾಜಕೀಯ ಕಾರ್ಯದಲ್ಲಿ ಮಗ್ನವಾಗಿದೆ ಎಂದರು.
ಆರ್‌ಎಸ್ಎಸ್ ಬ್ಯಾನ್ ಮಾಡಬೇಕು ಎನ್ನುವ ವ್ಯಕ್ತಿಗಳು ಅಜ್ಞಾನದ ಅಂದಕಾರದಲ್ಲಿ ಇದ್ದಾರೆ. ಆರ್‌ಎಸ್ಎಸ್ ನಂತಹ ಸಂಘಟನೆ ಕಟ್ಟಬೇಕೆಂದು ಜಗತ್ತಿನ ಹಲವು ರಾಷ್ಟ್ರಗಳು ಮುಂದಾಗಿವೆ ಎಂದು ಇದೇ ಸಂದರ್ಭದಲ್ಲಿ ಹೇಳಿದರು.