ಪಿಂಚಣಿ ಸಮಸ್ಯೆ ಪರಿಹರಿಸಲು ಸಮಿತಿ ರಚನೆ: ಸೀತಾರಾಮನ್ ಭರವಸೆ

ಸೀತಾರಾಮನ್
Advertisement

ನವದೆಹಲಿ: ಸರ್ಕಾರಿ ನೌಕರರ ಪಿಂಚಣಿಗೆ ಸಂಬಂಧಿಸಿದ ಸಮಸ್ಯೆಗಳನ್ನು ಪರಿಶೀಲಿಸಲು ಎಫ್ಎಂ ಸಮಿತಿಯ ರಚಿಸುವುದಾಗಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭರವಸೆ ನೀಡಿದ್ದಾರೆ.
ಸಂಸತ್ತಿನ ಎರಡನೇ ಬಜೆಟ್ ಅಧಿವೇಶನದಲ್ಲಿ 2023ರ ಹಣಕಾಸು ಮಸೂದೆ ಮಂಡಿಸುವ ವೇಳೆ ಅವರು, ಸರ್ಕಾರಿ ನೌಕರರ ಪಿಂಚಣಿ ವ್ಯವಸ್ಥೆಯಲ್ಲಿನ ಸಮಸ್ಯೆ ನಿವಾರಿಸಲು ಹಣಕಾಸು ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚಿಸಲು ನಿರ್ಧರಿಸಲಾಗಿದೆ. ಈ ಬಗ್ಗೆ ರಾಜ್ಯ ಹಾಗೂ ದೇಶಕ್ಕೆ ಅಳವಡಿಕೆಯಾಗುವಂತೆ ಸಮಿತಿ ಪರಿಹಾರ ಸೂಚಿಸಬೇಕು ಎಂದು ತಿಳಿಸಲಾಗಿದೆ ಎಂದರು.
ಇನ್ನು ಅದಾನಿ ಸಮೂಹದ ಕಂಪನಿಗಳ ಮೇಲಿನ ಆರೋಪಗಳ ಕುರಿತು ಜೆಪಿಸಿ ತನಿಖೆಗೆ ಆಗ್ರಹಿಸಿ ಪ್ರತಿಪಕ್ಷಗಳ ಸದಸ್ಯರ ಗದ್ದಲದ ನಡುವೆಯೇ ಹಣಕಾಸು ಮಸೂದೆ 2023 ಅನುಮೋದನೆಗೊಂಡಿತು.