ಹುಬ್ಬಳ್ಳಿ: ಕುಂಚ ಬ್ರಹ್ಮ ಡಾ. ಎಂವಿ. ಮಿಣಜಗಿ ಅವರ 122ನೇ ಜನ್ಮದಿನದ ಪ್ರಯುಕ್ತ ಅವರ ಶಿಷ್ಯವರ್ಗ ಹಾಗೂ ನಾಡಿನ ಖ್ಯಾತ ಕಲಾವಿದರಿಂದ ಕಲಾಕೃತಿ ಪ್ರದರ್ಶನ ಮತ್ತು ಮಾರಾಟ ಹುಬ್ಬಳ್ಳಿ ಮಹಾನಗರ ಪಾಲಿಕೆಯಿಂದ ಲ್ಯಾಮಿಂಗ್ಟನ್ ಶಾಲೆಯವರೆಗೂ ನಡೆಯಿತು.
ಖ್ಯಾತ ಕಲಾವಿದರು ತಮ್ಮ ಕಲಾಕೃತಿಗಳನ್ನು ಪುಟ್ ಪಾತನಲ್ಲಿ ಪ್ರದರ್ಶನ ಮಾಡಿದ್ದು, ಗಮನ ಸೆಳೆಯಿತು.
ಸಾರ್ವಜನಿಕರು ಕಲಾಕೃತಿಗಳು ನೋಡಿ ಸಂತೋಷ ಪಟ್ಟರಲ್ಲದೆ, ಖರೀದಿಸಿ ಕೂಡ ಕಲಾವಿದರ ಕಲೆಯನ್ನು ಮೆಚ್ಚಿಕೊಂಡರು.
ಸುಮಾರು 75 ಕಲಾವಿದರಿಂದ 1000 ಕ್ಕೂ ಹೆಚ್ಚು ಕಲಾಕೃತಿಗಳು ಪ್ರದರ್ಶನವಾದವು. ವಿಶೇಷವಾಗಿ ಹುಬ್ಬಳ್ಳಿಯಲ್ಲಿ ಗ್ಯಾಲರಿ ಇಲ್ಲ ಎಂಬ ಕಲಾವಿದರ ನೋವು ಈ ಪ್ರದರ್ಶನದಲ್ಲಿ ಎದ್ದು ಕಂಡು ಬಂತು…