ಪತ್ನಿಯನ್ನೇ ಕೊಲೆಗೈದ ಪತಿ

ಕೊಲೆ
Advertisement

ಧಾರವಾಡ: ಕೋಳಿಕೇರಿಯ ನವಲೂರು ಅಗಸಿ ಬಳಿ ಕುಡಿದ ಅಮಲಿನಲ್ಲಿ ತನ್ನ ಪತ್ನಿಯನ್ನೇ ಬರ್ಬರವಾಗಿ ಹತ್ಯೆ ಮಾಡಿರುವ ಪ್ರಕರಣ ಗುರುವಾರ ನಡೆದಿದೆ.
ತಾಲೂಕಿನ ಯಾದವಾಡ ಗ್ರಾಮದ ಕೋಳಿಕೆರೆಯಲ್ಲಿ ವಾಸವಾಗಿದ್ದ ಗದಿಗೆಪ್ಪ ಪಟಾತ್(42) ತನ್ನ ಪತ್ನಿ ಮಂಜವ್ವಳನ್ನು ಕೊಲೆ ಮಾಡಿದವನು. ಕುಡಿದ ಅಮಲಿನಲ್ಲಿ ಪತ್ನಿಯೊಂದಿಗೆ ಜಗಳವಾಡಿ ಕಲ್ಲಿನಿಂದ ತಲೆಗೆ ಬಲವಾಗಿ ಹೊಡೆದು ಪರಾರಿಯಾಗಿದ್ದಾನೆ. ಮಂಜವ್ವ ಕೂಗುವ ಶಬ್ದ ಕೇಳಿ ಸ್ಥಳೀಯರು ಗಾಯಾಳು ಮಂಜವ್ವಳನ್ನು ಜಿಲ್ಲಾಸ್ಪತ್ರೆಗೆ ಸೇರಿಸಿ ಚಿಕಿತ್ಸೆಗೆ ದಾಖಲಿಸಿದ್ದಾರೆ. ಆದರೆ, ಚಿಕಿತ್ಸೆ ಫಲಿಸದೆ ಮಂಜವ್ವ ಸಾವನ್ನಪ್ಪಿದ್ದಾಳೆ. ಈ ಕುರಿತು ವಿದ್ಯಾಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಪತ್ತೆಗೆ ಜಾಲ ಬೀಸಿದ್ದಾರೆ.
ಆರೋಪಿ ಗದಿಗೆಪ್ಪ 2005ರಲ್ಲಿ ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೋರ್ವನನ್ನು ಕೊಲೆ ಮಾಡಿದ್ದನು. ಈ ಹಿನ್ನೆಲೆಯಲ್ಲಿ 2009ರಲ್ಲಿ ಈತನಿಗೆ ಜೈಲು ಶಿಕ್ಷೆಯಾಗಿತ್ತು. ಶಿಕ್ಷೆ ಅನುಭವಿಸಿ 2018ರಲ್ಲಿ ಬಿಡುಗಡೆಯಾಗಿ ಹೊರಗೆ ಬಂದಿದ್ದನು.