ಪತಿಗೆ ತಪ್ಪಿದ ಕೈ ಟಿಕೆಟ್‌: ಪಕ್ಷೇತರರಾಗಿ ಪತ್ನಿ ಸ್ಪರ್ಧೆ

ಸೌಭಾಗ್ಯ ಬಸವರಾಜನ್
Advertisement

ಚಿತ್ರದುರ್ಗ: ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಹಿನ್ನಲೆಯಲ್ಲಿ ಮಾಜಿ ಶಾಸಕ ಎಸ್.ಕ. ಬಸವರಾಜನ್ ಪತ್ನಿ ಸೌಭಾಗ್ಯ ಬಸವರಾಜನ್ ಅವರನ್ನು ಪಕ್ಷೇತರರಾಗಿ ಕಣಕ್ಕಿಳಿಸುವುದಾಗಿ ಘೋಷಣೆ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಬಸವರಾಜನ್ ಅವರು, ಕಾಂಗ್ರೆಸ್‌ ಟಿಕೆಟ್‌ ಕೈ ತಪ್ಪಿದ್ದು, ಈ ಬಾರಿ ಪಕ್ಷೇತರವಾಗಿ ನನ್ನ ಪತ್ನಿ ಸೌಭಾಗ್ಯ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ ಎಂದು ತಿಳಿಸಿದ್ದಾರೆ. ಈ ಮೂಲಕ ಕಾಂಗ್ರೆಸ್‌ಗೆ ಭಾರಿ ಹೊಡೆತ ಬಿದ್ದಂತಾಗಿದೆ.
ಕ್ಷೇತ್ರದಲ್ಲಿ ಶೇ. 50ಕ್ಕೂ ಹೆಚ್ಚು ಮಹಿಳಾ ಮತದಾರರರಿದ್ದು ಮಹಿಳಾ ಪ್ರತಿನಿಧಿಯಾಗಿ ಕಣಕ್ಕಿಳಿಯುವೆ ಎಂದಿರುವ ಸೌಭಾಗ್ಯ ಬಸವರಾಜನ್. ಈ ಹಿಂದೆ ನಾಲ್ಕು ಬಾರಿ ಜಿಪಂ ಅಧ್ಯಕ್ಷಳಾಗಿ ಕಾರ್ಯನಿರ್ವಹಿಸಿದ್ದೇನೆ. ಗ್ರಾಪಂ, ತಾಪಂ, ಅಧ್ಯಕ್ಷಳಾಗಿಯೂ ಕಾರ್ಯನಿರ್ವಹಿಸಿದ್ದೇನೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಎಂದೂ ಸೋಲು ಕಂಡಿಲ್ಲ. ಕ್ಷೇತ್ರದ ಮಹಿಳೆಯರು ನನ್ನ ಆಯ್ಕೆ ಮಾಡುತ್ತಾರೆಂಬ ಭರವಸೆ ಇದೆ ಎಂದು ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.