ಕುಷ್ಟಗಿ: ಗಾಲಿ ಜನಾರ್ಧನ ರೆಡ್ಡಿ ಪ್ರಭಾಕರ್ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಭಾಕರ್ ಚಿಣಿ ಅವರ ಜೊತೆಗೆ ಸಂಪರ್ಕದಲ್ಲಿ ಇದ್ದಿರೋದು ನಿಜವಾಗಿದೆ ಕೆಪಿಸಿಸಿ ರಾಜ್ಯ ಉಪಾಧ್ಯಕ್ಷ ಹಸನಸಾಬ ದೋಟಿಹಾಳ ಯಲಬುರ್ಗಿ ಹೇಳಿದರು.
ಪಟ್ಟಣದ ಬುತ್ತಿ ಬಸವೇಶ್ವರ ವಾರ್ಡ್ನ ಕಾಂಗ್ರೆಸ್ ಪಕ್ಷದ ಮುಖಂಡ ಪ್ರಭಾಕರ್ ಚಿಣಿ ಅವರ ನಿವಾಸದಲ್ಲಿ ಪ್ರಭಾಕರ್ ಚಿಣಿ ಅಭಿಮಾನಿಗಳ ಬಳಗದ ವತಿಯಿಂದ ೨೦೨೩ನೇ ವರ್ಷದ ಪಾಕೀಟ್ ಡೈರಿ ದಿನಚರಿ ಬಿಡುಗಡೆ ಸಮಾರಂಭದಲ್ಲಿ ಮಾತನಾಡಿದರು, ನಾನು ಮತ್ತು ಪ್ರಭಾಕರ ಚಿಣಿ ಅವರು ಕಾಂಗ್ರೆಸ್ ಪಕ್ಷದ ವತಿಯಿಂದ ಮುಂಬರುವ 2023ರ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಅರ್ಜಿ ಸಲ್ಲಿಸಿದ್ದೇವೆ, ಆದರೆ ಬಿಜೆಪಿ ಪಕ್ಷದಿಂದ ಅಲ್ಲ ಎಂದು ಮಾಜಿ ಶಾಸಕ ಕೆ. ಶರಣಪ್ಪ ಅವರಿಗೆ ಖಡಕ್ಕಾಗಿ ತಿಳಿಸಿದರು.
ಕುಷ್ಟಗಿ ಇಂದ ಸ್ಪರ್ಧೆ ಮಾಡಲು ಅರ್ಜಿ ಸಲ್ಲಿಸಿದ್ದೇವೆ ಆದರೆ ಬಿಜೆಪಿ ಪಕ್ಷದಿಂದ ಸ್ಪರ್ಧೆ ಮಾಡಲು ಅಲ್ಲ ಇದನ್ನು ನೀವು ತಿಳಿದುಕೊಳ್ಳಬೇಕೆಂದು ಶರಣಪ್ಪ ವಕೀಲರಿಗೆ ತಿರುಗುಬಾಣದ ಮೂಲಕ ಮಾತನಾಡಿದರು. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪಕ್ಷ ಬದಲಿಸುವುದು ದೊಡ್ಡ ಅಪರಾಧ ಅಲ್ಲ ಅದು ಕೆ.ಶರಣಪ್ಪ ವಕೀಲರು ಸಹ ಜೆಡಿಎಸ್ ಪಕ್ಷದಿಂದ ಮೂರು ನಾಲ್ಕು ಬಾರಿ ವಿಧಾನಸಭೆ ಚುನಾವಣೆಯಲ್ಲಿ ಸೋತ ನಂತರ ನೀವು ಬಿಜೆಪಿಗೆ ಹೋಗಿದ್ದೀರಿ, ಪಕ್ಷ ಬದಲಾಯಿಸುವುದು ಅಪರಾಧವಲ್ಲ ಎಂದು ಮಾಜಿ ಶಾಸಕರಿಗೆ ತಿಳಿಸಿದರು.