ಪಕ್ಷೇತರನಾಗಿ ಸ್ಪರ್ಧೆ: ಟವೆಲ್‌ ಹಾಕಿ ಭಿಕ್ಷೆ ಕೇಳಿದ ವೈ.ಎಸ್‌.ವಿ ದತ್ತ

YSV Datta
Advertisement

ಚೆಕ್ಕಮಗಳೂರು: ಕಡೂರ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ವೈ.ಎಸ್‌.ವಿ ದತ್ತ ಘೋಷಣೆ ಮಾಡಿದ್ದಾರೆ.
ಕಾಂಗ್ರೆಸ್‌ನಿಂದ ಟಿಕೆಟ್ ಕೈ ತಪ್ಪಿದ ಹಿನ್ನೆಲೆ ಬೇಸರಗೊಂಡಿದ್ದ ಅವರು, ಈಗ ಪಕ್ಷೇತರ ಅಭ್ಯರ್ಥಿಯಾಗಿ ಟವೆಲ್ ಗುರುತಿನಿಂದ ಸ್ಪರ್ಧೆಗಿಳಿಯುವುದಾಗಿ ಹೇಳಿದ್ದಾರೆ. ಅಲ್ಲದೇ
ಇದೇ ವೇಳೆ ವೈ.ಎಸ್‌.ವಿ ದತ್ತ ಅವರು ಹೆಗಲ ಮೇಲೆ ಟವೆಲ್ ಹಾಕಿಕೊಂಡು ಮತ ಮತ್ತು ಚುನಾವಣೆ ಖರ್ಚಿಗಾಗಿ ಹಣ ನೀಡಿ ಎಂದು ಕ್ಷೇತ್ರದ ಜನರ ಬಳಿ ಭಿಕ್ಷೆ ಬೇಡಿದ್ದು, ಅಭಿಮಾನಿಗಳು 50 ಸಾವಿರ, ಲಕ್ಷ, 2 ಲಕ್ಷದ ಚೆಕ್ ನೀಡಿದ್ದಾರೆ. ಮತ್ತಷ್ಟು ಹಣವನ್ನು ಕೊಡುತ್ತೇವೆ ಅಂತಲೂ ಅಭಿಮಾನಿಗಳು ಹೇಳಿದ್ದಾರೆ.