ಪಂಚರತ್ನ ಕಾರ್ಯಕ್ರಮದಲ್ಲಿ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ ಕುಮಾರಸ್ವಾಮಿ

ಪಂಚರತ್ನ
Advertisement

ಕೋಲಾರದಲ್ಲಿ ಮಾಜಿ ಸಿಎಂ ಕುಮಾರಸ್ವಾಮಿ ಪಂಚರತ್ನ ಕಾರ್ಯಕ್ರಮದ ವೇದಿಕೆಯಲ್ಲಿ ಮಾತಾನಡಿ ಮತ್ತೆ ಅಧಿಕಾರಕ್ಕೆ ಬಂದು ನಾನು ಸಿಎಂ ಆಗಬೇಕು ಎಂಬುದು ನನ್ನ ಬಯಕೆ ಅಲ್ಲ. ಮುಂದೆ ಜನರ ಕಷ್ಟಗಳನ್ನ ನಿವಾರಿಸಲು ಜನತಾದಳಕ್ಕೆ ಆಶೀರ್ವದಿಸಬೇಕು.
ಕಾಂಗ್ರೇಸ್ ಆಡಳಿತ ಆ ಸಂಧರ್ಭದಲ್ಲಿ ನೋಡಿದ್ದೇವೆ. ಸುಮಾರು 3 ಸಾವಿರಕ್ಕೂ ಹೆಚ್ಚಿನ ಕುಟುಂಬಗಳು ಆತ್ಮಹತ್ಯೆ ಮಾಡಿಕೊಂಡಿತು. ಆಗ ರೈತರಿಗೆ ವಿಶ್ವಾಸ ಮೂಡಿಸುವ ಕೆಲಸ ಮಾಡಲಿಲ್ಲ. ಆಗ ಕಾಂಗ್ರೇಸ್ ರೈತನ ಕಷ್ಟಗಳಿಗೆ ಸ್ಪಂದಿಸಲಿಲ್ಲ. ಕಾಂಗ್ರೆಸ್ ಹಾಗೂ ಬಿಜೆಪಿ ಪಕ್ಷಗಳು, ಸಾಲ‌ಮನ್ನಾ ಮಾಡಲು ದುಡ್ಡು ಎಲ್ಲಿ ತರ್ತಾನೆ ಎಂದು ಲಘುವಾಗಿ ಮಾತನಾಡಿದರು. ಮತ್ತೆ ಅವರೆ ನನ್ನ ಮನೆ ಬಾಗಿಲಿಗೆ ಬಂದು ಸರ್ಕಾರ ರಚನೆ ಮಾಡಬೇಕೆಂದರು.
ಆಗ ರೈತರ ಸಾಲ ಮನ್ನಾ ಮಾಡಲು ಆಗುವುದಿಲ್ಲ. ನಮ್ಮ ಭಾಗ್ಯಗಳು ಮುಂದುವರೆಯಬೇಕು. ಆದರೂ 25 ಸಾವಿರ ಕೋಟಿ ಸಾಲಮನ್ನಾ ಮಾಡಿದ್ದೇನೆ. ಸಿದ್ದರಾಮಯ್ಯ ಕೋಲಾರಕ್ಕೆ ಬಂದು ಸಿಎಂ ಆಗಲು ಹೊರಟಿದ್ದಾರೆ.
ಸಿದ್ದರಾಮಯ್ಯ ಪಂಚರತ್ನ ರಥಯಾತ್ರೆ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಸಿದ್ದರಾಮಯ್ಯ ಅವರೆ, ನನಗೆ ಇದು ದೇವರ ಕಾರ್ಯ ಮಾಡುತ್ತಿದ್ದೇನೆಂದು ಹೃದಯದಲ್ಲಿ ಇಟ್ಟುಕೊಂಡಿದ್ದೇನೆ. ನಿಮ್ಮ ಭಾಗ್ಯಗಳಿಂದ ಬಡ ಜನರು ಬದುಕಲು ಸಾಧ್ಯವಾಗುತ್ತಿಲ್ಲ. ಜಾತ್ಯಾತೀತ ಜನತಾದಳ ಬರೀ ಸಾಲಮನ್ನಾ ಬಗ್ಗೆ ಮಾತನಾಡುತ್ತಾರೆಂಬ ಭಾವನೆ ಬಿಟ್ಟುಬಿಡಿ. ಹುಡುಗಾಟಿಕೆ ಕಾರ್ಯಕ್ರಮ ಇದಲ್ಲ. ಸಿದ್ದರಾಮಯ್ಯರನ್ನ ಕೋಲಾರಕ್ಕೆ ನೀರನ್ನ ಹರಿಸಿದ ಭಗೀರಥ ಎಂದು ಹೇಳುತ್ತಾರೆ. ಯಾವ ನೀರನ್ನ ಕೊಟ್ಟಿದ್ದೀರಿ.? ಎತ್ತಿನ ಹೊಳೆ ಕುಡಿಯುವ ನೀರು ಕೊಡುತ್ತೇನೆ ಎಂದು ಹೇಳಿ. ವಿಷ ಮಿಶ್ರಿತ ನೀರನ್ನ ಕೆರೆಗಳಿಗೆ ತುಂಬಿಸಿದ್ದೀರಿ. ರೋಗಗಳಿಂದ ಜಿಲ್ಲೆಯ ಜನರ ಬದುಕನ್ನ ಮುಗಿಸಲು ಹೊರಟಿದ್ದೀರಿ.ಚಿಕ್ಕಬಳ್ಳಾಪುರ ಜಿಲ್ಲೆಯವರು ನೀರು ಕೇಳು ಬಂದಾಗ ಲಾಠೀ ಏಟು ನೀಡಿದ್ದೀರಿ. ಈಗ ಕೋಲಾರಕ್ಕೆ ಬಂದು ಮತ ಪಡೆದು ಜಿಲ್ಲೆಯ ಉದ್ದಾರ ಮಾಡಲು ಮುಂದಾಗಿದ್ದಾರೆ. ಕೋಲಾರದವರ ಪುಣ್ಯ. ಮಳೆ ನೀರಿನಿಂದ ಕೊಳೆ ನೀರು ಹೋಗಿದೆ. ಮಳೆಯಾಗದೆ ಹೋದರೆ ಜನರ ಗತಿ ಏನಾಗುತ್ತಿತ್ತು. ಎತ್ತಿನ ಹೊಳೆ ನೀರನ್ನ ಒಂದು ಹನಿ ನೀರನ್ನ ಕೋಲಾರಕ್ಕೆ ನೀಡಿದ್ದೀರ ರಮೇಶ್ ಕುಮಾರ್.ಈಗ ಪರ್ಸಂಟೇಜ್ ಬಗ್ಗೆ ಚರ್ಚೆ ಮಾಡುತ್ತಿದ್ದೀರಿ, ನೀವು ಮಾಡಿದ್ದು ಅದೆ. ಮೋಸ ಮಾಡುವುದಕ್ಮೂ ಒಂದು ಇತಿಮಿತಿ ಇದೆ. ಕೋಲಾರದಲ್ಲಿ ಡಿಸಿಸಿ ಬ್ಯಾಂಕ್ ದುರ್ಭಳಕೆ ಮಾಡಿಕೊಂಡಿದ್ದಾರೆ. ಅದರಿಂದ ಶ್ರೀನಿವಾಸಪುರದಲ್ಲಿ ವೆಂಕಟಶಿವಾರೆಡ್ಡಿ ಅವರು ಸೋಲಲು ಕಾರಣವಾಗಿದೆ. ಸಿದ್ದರಾಮಯ್ಯ ಹಾಗೂ ಯಡಿಯೂರಪ್ಪ ಮೈತ್ರಿ ಸರ್ಕಾರ ಪತನ ಮಾಡಿದ್ದಾರೆ. ಕಾಂಗ್ರೇಸ್ ನಾಯಕರ ಕುತಂತ್ರದಿಂದ ನಮ್ಮ‌ಅಭ್ಯರ್ಥಿಗಳು ಸೋತಿದ್ದಾರೆ. ಇಲ್ಲವಾದಲ್ಲಿ 75 ಸ್ಥಾನಗಳು ಬರುತ್ತಿತ್ತು.
ಕರ್ನಾಟಕ‌ ರಾಜ್ಯದಲ್ಲಿ ನಡೆಯುತ್ತಿರುವ ಸರ್ಕಾರ, ಬಿಜೆಪಿಯವರು ಮತ್ತೆ ಸಿದ್ದರಾಮಯ್ಯನವರದ್ದು. ನಾಚಿಕೆಯಾಗಬೇಕು ನಿಮಗೆ. ಯಾರ ಮನೆ ಬಾಗಿಲಿಗೂ ಅಧಿಕಾರಕ್ಕಾಗಿ ಹೋಗಿಲ್ಲ. ನಮ್ಮ‌ಶಕ್ತಿ ನೋಡಿ ನಮ್ಮ‌ ಮನೆ ಬಾಗಿಲು ತಳ್ಳುತ್ತಾರೆ‌. ಇಂತಹ ದರಿದ್ರ ಸರ್ಕಾರ, ಈ ನಾಡಿನ ಜೊತೆ ಚೆಲ್ಲಾಟ ಆಡುತ್ತಿರುವುದಕ್ಕೆ ಕಾರಣ ಕಾಂಗ್ರೇಸ್ ಪಕ್ಷ. ಇವತ್ತು ಸಂಭಾವನೀಯ ಅಭ್ಯರ್ಥಿಗಳ ಪಟ್ಟಿ ಘೋಷಣೆ ಮಾಡಬೇಕಾಗಿತ್ತು. ಇವತ್ತಿನ ದಿನ ಪ್ರಾಶಸ್ತ್ಯವಾಗಿಲ್ಲ ಎಂದು ಘೋಷಣೆ ಮಾಡಲಿಲ್ಲ. ನಮ್ಮ ಮನೆಯಲ್ಲಿ ಜ್ಯೋತಿಷಿಗಳಿದ್ದಾರೆ. ಇವತ್ತಿನ ದಿನ ಸರಿಯಿಲ್ಲ ಎಂದು ರೇವಣ್ಣ ಹೇಳಿದ್ದಾರೆ. ಹೀಗಾಗಿ ಅಭ್ಯರ್ಥಿಗಳ ಘೋಷಣೆ ಮಾಡುತ್ತಿಲ್ಲ. ನಮ್ಮ‌ ಪಕ್ಷದಲ್ಲಿ ಅಭ್ಯರ್ಥಿಗಳ ಕೊರತೆ ಇಲ್ಲ ಎಂದರು