ವಿಧಾನಸಭೆ: ಪಂಚಮಸಾಲಿ ಮೀಸಲಾತಿಗೆ ನಾನು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾನೆ ಎಂದು ಮಾಜಿ ಸಿಎಂ ಬಿ.ಎಸ್ ಯಡಿಯೂರಪ್ಪ ಸದನಕ್ಕೆ ಸ್ಪಷ್ಟಪಡಿಸಿದರು.
ಶೂನ್ಯವೇಳೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದ ಅವರು, ಪಂಚಮಸಾಲಿ ಸಮುದಾಯಯಕ್ಕೆ ೨ಎ ಮೀಸಲಾತಿ ನೀಡುವ ಬಗ್ಗೆ ನಾನು ಪ್ರಾಮಾಣಿಕ ಶ್ರಮ ಹಾಕಿದ್ದೇನೆ. ನನ್ನ ಅವಧಿಯಲ್ಲಿ ತಾಂತ್ರಿಕ ಕಾರಣಗಳಿಂದ ಆಗಲಿಲ್ಲ. ಪಂಚಮಸಾಲಿ ಸಮುದಾಯವನ್ನು ೨ಎಗೆ ಸೇರಿಸಿ ಎಂಬುದು ನನ್ನ ಒತ್ತಾಯವಾಗಿದೆ. ಈ ಹಿಂದೆ ನಾನು ಪಂಚಮಸಾಲಿ ಸಮುದಾಯಕ್ಕೆ ೩ಬಿ ವರ್ಗಕ್ಕೆ ಮೀಸಲಾತಿ ತಂದವನು. ಪ್ರವರ್ಗ ೨ಎ ಮೀಸಲಾತಿಗೆ ಪಂಚಮಸಾಲಿ ಸಮುದಾಯ ಒತ್ತಾಯಿಸಿತ್ತು. ತಾಂತ್ರಿಕ ದೋಷದಿಂದ ಹಿನ್ನಡೆ ಆಗಬಾರದೆಂಬ ಸದುದ್ದೇಶದಿಂದ ಹಿಂದುಳಿದ ವರ್ಗ ಆಯೋಗ ವರದಿ ನೀಡಲು ಸೂಚಿಸಿದ್ದಾರೆ ಎಂದರು.