ಕಾರ್ಕಳ: ಶ್ರೀರಾಮ ಸೇನೆಯ ಸಂಸ್ಥಾಪಕ ಪ್ರಮೋದ್ ಮುತಾಲಿಕ್ ನೈಜ ಹಿಂದುತ್ವದ ರಕ್ಷಣೆಗೋಸ್ಕರ ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬ ಸಂಗತಿ ತಿಳಿದು ಅವರ ಈ ನೈಜ ಹಿಂದುತ್ವದ ನಕಲಿ ಮುಖದ ಹಿಂದಿರುವ ಕೆಲ ಅಸಲಿ ಸಂಗತಿಯನ್ನು ಮುಗ್ಧ ಕರಾವಳಿಯ ಜನರಿಗೆ ತಿಳಿಸುವುದು ನಮ್ಮ ಆದ್ಯ ಕರ್ತವ್ಯ ಮತ್ತು ಅವರ ಮಾತಿಗೂ ಅವರ ಕೃತಿಗೂ ಯಾವುದೇ ಸಂಬಂಧವಿಲ್ಲ. ಉತ್ತರ ಕರ್ನಾಟಕದ ನಮಗೆ ಮೋಸ ಮಾಡಿದ ಹಾಗೆ ತಾವು ಅವರನ್ನು ನಂಬಿ ಮೋಸ ಹೋಗಬೇಡಿ ಹಾಗೂ ನೈಜ ಹಿಂದುತ್ವ ಎಂದು ನಂಬಿ ನಕಲಿ ಹಿಂದುತ್ವಕ್ಕೆ ಯುವಕರು ಬಲಿಯಾಗದಿರಿ ಎಂದು ಶ್ರೀರಾಮ ಸೇನೆಯ ಮಾಜಿ ರಾಜ್ಯ ಸಂಚಾಲಕ ರವಿ ವಿ. ಸಿಂದ್ಲಿಂಗ್ ತಿಳಿಸಿದರು.
ಕಾರ್ಕಳದಲ್ಲಿಂದು ಪತ್ರಿಕಾಗೋಷ್ಠಿಯಲ್ಲಿ ಹರಿಹಾಯ್ದಿದ ಅವರು, ಪ್ರಮೋದ್ ಮುತಾಲಿಕರ ಹಿಂದುತ್ವದ ಪ್ರಖರ ಭಾಷಣದಿಂದ ಪ್ರಭಾವಿತರಾಗಿ ಉತ್ತರ ಕರ್ನಾಟಕದ ಭಾಗದಲ್ಲಿ ೧೫ ವರ್ಷಗಳ ಕಾಲ ಹಿಂದು ಸಂಪಘಟನೆ ಬೆಳೆಸುವುದಕೋಸ್ಕರ ದುಡಿದರು. ಆದರೆ ಮುತಾಲಿಕ್ ಅವರ ಹಿಂದುತ್ವ ಕೇವಲ ಭಾಷಣಕ್ಕಾಗಿ ಮಾತ್ರ. ಹಿಂದುತ್ವ ಮತ್ತು ಅದರೊಳಗಿನ ಸತ್ಯ ಹಾಗೂ ವ್ಯವಹಾರಗಳೇ ಬೇರೆ. ಬೇರೆ ಬೇರೆ ರಾಜ್ಯದ ಯುವಕರ ಹೆಸರಿನಲ್ಲಿ ಸಂಗ್ರಹವಾದ ಹಣ ಹಿಂದುತ್ವಕ್ಕಾಗಿ ಹುತಾತ್ಮರಾದ ಹಿಂದು ಯುವಕರ ಮನೆಗೆ ಮುಟ್ಟಿಲ್ಲ. ಉತ್ತರ ಕರ್ನಾಟಕ ಭಾಗದ ನಾವೆಲ್ಲರೂ ಅವರ ಸ್ವಾರ್ಥ ಹಾಗೂ ಜನದಾಹದ ಮನಸ್ಸಿನ ಅವರ ರಾಷ್ಟ್ರೀಯ ಹಿಂದು ಸೇನಾ ಪಕ್ಷದಿಂದ ಚುನಾವಣಾ ಕಣಕ್ಕಿಳಿಸಿ ನಮ್ಮನ್ನು ಬಲಿ ಹಾಕಿದರು ಎಂದರು.