ಬಳ್ಳಾರಿ: ನಗರದ ಅನಂತಪುರ ರಸ್ತೆಯಲ್ಲಿ ನಿರ್ಮಿಸಿದ ನೂತನ ಜಿಲ್ಲಾಡಳಿತ ಭವನವನ್ನು ಇಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು. ಉದ್ಘಾಟನೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಇಂದು ಜಿಲ್ಲಾ ಕೇಂದ್ರದಲ್ಲಿ ಹಲವು ಕಾಮಗಾರಿಗೆ ಚಾಲನೆ ನೀಡಿದ್ದೇನೆ ಎಂದರು.
ತಾಯಿ ಮಕ್ಕಳ 400 ಬೆಡ್ ಆಸ್ಪತ್ರೆ, ಸ್ಟೇಡಿಯಂ ಉದ್ಘಾಟನೆ ಸೆರಿ 600 ಕೋಟಿ ರು.ನ ಕಾಮಗಾರಿಗೆ ಚಾಲನೆ ಕೊಟ್ಟಿರುವೆ ಎಂದರು. ಈ ಭಾಗದಲ್ಲಿ ಹಲವರು ಸ್ಸ್ಟೀಲ್ ಕೈಗಾರಿಕೆ ಮಾಡಲು ಉದ್ಯಮಿಗಳು ಬಂದಿದ್ದರು. ನೂರಾರು ಎಕರೆ ಭೂಮಿ ಪಡೆದ ಹಲವರು ಕಾರ್ಖಾನೆ ಆರಂಭಿಸಿಲ್ಲ. ಯಾರು ಕೈಗಾರಿಕೆ ಆರಂಭಿಸಿಲ್ಲ ಅವರಿಂದ ಭೂಮಿ ವಾಪಾಸ್ ಪಡೆಯುವೇವು ಎಂದು ಅವರು ತಿಳಿಸಿದರು. ಬಳ್ಳಾರಿ ವಿಮಾನ ನಿಲ್ದಾಣ ಕಾಮಗಾರಿ ಶ್ರೀಘ್ರದಲ್ಲಿ ಆರಂಭವಾಗಲಿದೆ, ನಾನೇ ಶಂಕುಸ್ಥಾಪನೆ ಮಾಡುವೆ ಎಂದು ಅವರು ಪ್ರಶ್ನೆ ಒಂದಕ್ಕೆ ಉತ್ತರಿಸಿದರು
ಇನ್ನು ತುಂಗಭದ್ರಾ ಜಲಾಶಯಕ್ಕೆ ಸಮಾನಾಂತರ ಜಲಾಶಯ ಬಗ್ಗೆ ಉತ್ತರಿಸಿದ ಅವರು, ಈಗಾಗಲೇ ಡಿಪಿಆರ್ ರೆಡಿ ಆಗಿದ, ತುಂಗಭದ್ರಾ ಬೋರ್ಡ್ ನಿಂದ ಕ್ಲಿಯರೆನ್ಸ್ ಸಿಗಲಿದೆ . ಆಂದ್ರ ಸಿಎಂ ಜೊತೆ ಮಾತಾಡಿದ್ದೇನೆ ಅವರ ಹಿತಾಸಕ್ತಿ ಹಾಗೂ ರಾಜ್ಯದ ಹಿತಾಸಕ್ತಿಗೆ ಅನುಗುಣವಾಗಿ ಕೆಲಸ ಮಾಡ್ತೇವೆ ಎಂದರು. ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು, ಶಾಸಕರಾದ ನಾಗೇಂದ್ರ, ಸೋಮಶೇಖರ್ ರೆಡ್ಡಿ, ಸೋಮಲಿಂಗಪ್ಪ, ಜೆ.ಎನ್.ಗಣೇಶ್ ಇದ್ದರು.