ನೀರಿನಲ್ಲಿ ಮುಳುಗಿ ಇಬ್ಬರು ಬೌದ್ಧ ಬಿಕ್ಕುಗಳ ಸಾವು

Advertisement

ಮುಂಡಗೋಡ: ಈಜಲು ತೆರಳಿದ್ದ ಇಬ್ಬರು ಟಿಬೆಟಿಯನ್ ಬೌದ್ದ ಬಿಕ್ಕುಗಳು ನೀರಿನಲ್ಲಿ ಮುಳಗಿ ಸಾವನ್ನಪ್ಪಿದ್ದ ಘಟನೆ ಗುರುವಾರ ತಾಲೂಕಿನ ಬಾಚಣಕಿ ಜಲಾಶಯದಲ್ಲಿ ನಡೆದಿದೆ.
ತಾಲೂಕಿನ ಟಿಬೆಟಿಯನ್ ಲಾಮಾ ಕ್ಯಾಂಪ್ ನಂ.೨ ರ ಲೋಸಲಿಂಗ ಬೌದ್ಧ ಮಂದಿರದ ವಿದ್ಯಾರ್ಥಿಗಳಾದ ತಿನಲೆಯ್ ನಾಮಗೇಲ್ (೨೨), ಸಾಂಗೆ ವಾಂಗ್ಚೊಕ್ (೨೨) ಮೃತಪಟ್ಟ ಬೌದ್ಧ ಬಿಕ್ಕುಗಳು. ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.