ಚಿಕ್ಕೋಡಿ: ಇಲ್ಲಿನ ಹೊಸ ಹುಡ್ಕೂ ಕಾಲೂನಿ ನಿವಾಸಿ ಪಿಯುಸಿ ದ್ವಿತೀಯ ವರ್ಷದ ವಿದ್ಯಾರ್ಥಿ ದರ್ಶನ ಕಾಳೆ(18) ಶುಕ್ರವಾರ ಕಾಲೇಜ್‌ನಲ್ಲಿ ಕನಕ ಜಯಂತಿ ಕಾರ್ಯಕ್ರಮ ಆಚರಿಸಿದ ನಂತರ ಕಾಲೇಜ ಬಳಿ ಇರುವ ತೆರೆದ ಬಾವಿಯಲ್ಲಿ ಗೆಳೆಯರ ಜೂತೆ ಈಜಾಡಲು ಹೋದಾಗ ಆಯ ತಪ್ಪಿ ಬಿದ್ದು ಸಾನಪ್ಪಿರುವ ಘಟನೆ ನಡೆದಿದೆ.
ಸ್ಥಳೀಯರು ಕೂಡಲೇ ಪೊಲೀಸರು ಮತ್ತು ಅಗ್ನಿಶಾಮಕ ದಳದವರಿಗೆ ಮಾಹಿತಿ ನೀಡಿದ್ದು ಚಿಕ್ಕೋಡಿ ಅಗ್ನಿಶಾಮಕ ದಳದವರು ಸುಮಾರು ಮೂರು ಗಂಟೆ ಕಾರ್ಯಾಚರಣೆ ನಡೆಸಿ ಶವವನ್ನು ಹೊರತೆಗೆದಿದ್ದಾರೆ.