ವಿಜಯಪುರ: ನಡೆದಾಡುವ ದೇವರು ಶ್ರೀಸಿದ್ದೇಶ್ವರ ಸ್ವಾಮಿಗಳ ಇಚ್ಛೆಯಂತೆ ಅವರ ಪಾರ್ಥಿವ ಶರೀರದ ಅಂತಿಮ ಸಂಸ್ಕಾರವನ್ನು ಯಾವುದೇ ಸಂಪ್ರದಾಯದ ವಿಧಿ ವಿಧಾನಗಳಿಲ್ಲದೇ ಅಗ್ನಿಗೆ ಸಮರ್ಪಿಸಲಾಯಿತು.
ಇಚ್ಛಾಮರಣಿಯಾಗಿದ್ದ ಶ್ರೀಗಳು ತಮ್ಮ ಉಯಿಲಿನಲ್ಲಿ ಉಲ್ಲೇಖಿಸಿದಂತೆ ಅಂತಿಮ ವಿದಾಯ ಹೇಳಲಾಯಿತು. ನಿಸರ್ಗದತ್ತವಾದ ಶ್ರೀಗಳ ಪಾರ್ಥಿವ ಶರೀರ ನಿಸರ್ಗ ದೇವತೆಯಲ್ಲಿ ಲೀನವಾಯಿತು.
ಜ್ಞಾನಯೋಗಾಶ್ರಮದ ಅಧ್ಯಕ್ಷ ಬಸವಲಿಂಗ ಸ್ವಾಮಿಗಳು ಶ್ರೀಗಳ ಪಾರ್ಥಿವ ಶರೀರಕ್ಕೆ ಅಗ್ನಿಸ್ಪರ್ಶ ಮಾಡಿದರು. ಇದಕ್ಕೂ ಮುನ್ನ ಶ್ರೀಗಳ ಪಾರ್ಥಿವ ಶರೀರವನ್ನು ವೇದಾಂತ ಕೇಸರಿ ಶ್ರೀಮಲ್ಲಿಕಾರ್ಜುನ ಸ್ವಾಮಿಗಳ ಗದ್ದುಗೆಗೆ ತೆಗೆದುಕೊಂಡು ಹೋಗಿ ದರ್ಶನ ಮಾಡಿಸಲಾಯಿತು. ಶ್ರೀಗಳ ಕುಟುಂಬಸ್ಥರಿಗೆ ಅಗ್ನಿಸ್ಪರ್ಶಕ್ಕೆ ಮುನ್ನ ಪೂಜೆಗೆ ಅವಕಾಶ ಕಲ್ಪಿಸಲಾಗಿತ್ತು.