ನಿವೃತ್ತ ಶಿಕ್ಷಕ ಸಿದ್ದಯ್ಯ ಸಾವು

Advertisement

ಬಾಗಲಕೋಟೆ: ಶಿಕ್ಷಕರು ನಡೆಸುತ್ತಿರುವ ಹೋರಾಟದಲ್ಲಿ ಭಾಗಿಯಾಗಿ ಆತ್ಮಹತ್ಯೆಗೆ ಶರಣಾಗಿರುವ ಪಟ್ಟದಕಲ್ಲು ಗ್ರಾಮದ ನಿವೃತ್ತ ಶಿಕ್ಷಕ ಸಿದ್ದಯ್ಯ ಹಿರೇಮಠ ಅವರ ಪಾರ್ಥಿವ ಶರೀರದ ಮೆರವಣಿಗೆ ಬಾದಾಮಿ ಪಟ್ಟಣದಲ್ಲಿ ಶನಿವಾರ ನಡೆಯಿತು.
ಸಿದ್ದಯ್ಯ ಹಿರೇಮಠ ಕುಟುಂಬಸ್ಥರು ಪಾರ್ಥಿವ ಶರೀರಿ ಇರಿಸಿ ಕೆಲಕಾಲ ಪ್ರತಿಭಟನೆ ನಡೆಸಿದರು. ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತು.


ಬೆಂಗಳೂರಿನಲ್ಲಿ ಕಳೆದ ೧೪೦ ದಿನದಿಂದ ಶಿಕ್ಷಕರು ಹಳೆ ಪಿಂಚಣಿ ವ್ಯವಸ್ಥೆ ಮುಂದವರಿಸುವಂತೆ ಕೈಗೊಂಡಿರುವ ಹೋರಾಟದಲ್ಲಿ ಸಿದ್ದಯ್ಯ ಭಾಗಿಯಾಗಿದ್ದರು. ಬಜೆಟ್‌ನಲ್ಲಿ ಸರ್ಕಾರ ಭರವಸೆ ಈಡೇರಿಸುವ ನಿರೀಕ್ಷೆಯಲ್ಲಿ ಶಿಕ್ಷಕರಿದ್ದರು ಆದರೆ ಅದರ ಪ್ರಸ್ತಾಪವೇ ಆಗದಿದ್ದಾಗ ಮನನೊಂದು ಹಲವರು ಆತ್ಮಹತ್ಯೆಗೆ ಯತ್ನಿಸಿದ್ದರು ಈ ಪೈಕಿ ಬೀಳಗಿ ತಾಲೂಕು ಸುನಗದ ಶಂಕ್ರಪ್ಪ ಬೋರೆಡ್ಡಿ ಕೂಡ ರೈಲು ಹಳಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದರು. ಅವರ ಕುಟುಂಬಸ್ಥರು ಬಾಗಲಕೋಟೆ ಜಿಲ್ಲಾಡಳಿತ ಭವನದೆದುರು ಕಳೆದ ಎರಡು ದಿನಗಳ ಹಿಂದಷ್ಟೇ ಶವವಿರಿಸಿ‌ ಪ್ರತಿಭಟಿಸಿದ್ದರು ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಘಟನೆ ಜರುಗಿದ್ದು ಜಿಲ್ಲೆಯ ಸಿದ್ದಯ್ಯ ಕೂಡ ಸಾವನ್ನಪ್ಪಿದ್ದಾರೆ. ಶನಿವಾರ ಬಾದಾಮಿ ಪಟ್ಟಣದಲ್ಲಿ ಅವರ ಪಾರ್ಥಿವ ಶವದ ಮೆರವಣಿಗೆ ನಡೆಸಿ ಕುಟುಂಬಸ್ಥರಿಗೆ ನೆರವು ಒದಗಿಸುವಂತೆ ‌ಒತ್ತಾಯಿಸಲಾಯಿತು. ಖಾಸಗಿ ಶಾಲಾ ಶಿಕ್ಷಕರು ಭಾಗಿಯಾಗಿದ್ದರು.