ನೀರಿನಲ್ಲಿ ಮುಳಗಿ ಯುವಕ ಸಾವು: ಮತ್ತೊಂದೆಡೆ ಚಾಕು ಇರಿತ

Advertisement

ಬೆಳಗಾವಿ: ಬಣ್ಣದಾಟವಾಡಿ ಸ್ನಾನಕ್ಕೆ ತೆರಳಿದ್ದ ಯುವಕ ಮುಳುಗಿ ಸಾವನ್ನಪ್ಪಿದ ದಾರುಣ ಘಟನೆ ಇಂದು ನಡೆದಿದೆ. ಮಚ್ಚೆ – ಖಾದರವಾಡಿ ಅಣೆಕಟ್ಟಿನಲ್ಲಿ ಸ್ನಾನಕ್ಕೆಂದು ತೆರಳಿದ್ದ ವೇಳೆ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾನೆ. ಮೃತನನ್ನು ಪೀರನವಾಡಿ ಸಿದ್ದೇಶ್ವರ ಗಲ್ಲಿ ನಿವಾಸಿ ಅವಿನಾಶ್ ಅರವಿಂದ ದೇವಲೇಕರ್ (23) ಎಂದು ಗುರುತಿಸಲಾಗಿದೆ.
ಮೃತ ಅವಿನಾಶ್ ಬೆಳಗ್ಗೆ ರಂಗ ಪಂಚಮಿ ಬಣ್ಣದಾಟ ಆಡಿದ್ದು, ಮಧ್ಯಾಹ್ನ ಸ್ನಾನಕ್ಕೆ ಖಾದರವಾಡಿ ಅಣೆಕಟ್ಟೆಗೆ ತೆರಳಿದ್ದಾನೆ. ಅವನಿಗೆ ಈಜು ಬರುತ್ತಿರಲಿಲ್ಲ ಹಾಗಾಗಿ ನೀರಿನಲ್ಲಿ ಮುಳುಗಿ ಸಾವನ್ನಪ್ಪಿರುವ ಶಂಕೆ ಇದೆ. ಘಟನೆ ಇಂದು ಸಂಜೆ ನಡೆದಿದೆ. ಸುಮಾರು ನಾಲ್ಕೈದು ಗಂಟೆಗಳ ಪ್ರಯತ್ನದ ಬಳಿಕ ಕೊನೆಗೂ ಅವಿನಾಶ್ ಮೃತದೇಹವನ್ನು ಹೊರ ತೆಗೆಯಲಾಯಿತು. ವಡಗಾಂವ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಚಾಕುವಿನಿಂದ ಇರಿದು ಕೊಲೆ
ಹೋಳಿ ಸಂಭ್ರಮದಲ್ಲಿಯೆ ಯುವಕನನ್ನು ತಂಡವೊಂದು ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ನಡೆದಿದೆ. ಮಜಗಾಂವ ಲಕ್ಷ್ಮೀಗಲ್ಲಿಯ ಪ್ರತೀಕ ಏಕನಾಥ ಲೋಹಾರ(೨೩) ಎಂಬುವನೆ ಕೊಲೆಯಾದ ಯುವಕ. ಮಚ್ಛೆ ಫಾರ್ಮ್ ಹೌಸ್ ಬಳಿ ಯುವಕರ ತಂಡ ಈತನಿಗೆ ಚಾಕು‌ಇರಿದು ಅಲ್ಲಿಂದ ಓಡಿದ್ದನ್ನು ಕೆಲ ಸ್ಥಳೀಯರು ನೋಡಿದ್ದಾರೆ. ಅವರನ್ನು ಬೆನ್ನಟ್ಟುವಷ್ಟರಲ್ಲಿ ಪರಾರಿಯಾಗಿದ್ದಾರೆ. ಈ ಕೊಲೆಗೆ ಕಾರಣ ತಿಳಿದುಬಂದಿಲ್ಲ.ವಡಗಾಂವ ಗ್ರಾಮಾಂತರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.