ನಾಳೆ ಬಳ್ಳಾರಿಗೆ ಭೇಟಿ ನೀಡಿ ಎಲ್ಲಾ ಮಾಹಿತಿ ಪಡೆಯುವೆ… : ಸುಧಾಕರ್

Advertisement

ಬೆಂಗಳೂರು: ನಾಳೆ ನಾನು ಬಳ್ಳಾರಿಗೆ ಭೇಟಿ ನೀಡಿ ಎಲ್ಲಾ ಮಾಹಿತಿ ಪಡೆಯುತ್ತೇನೆ, ಯಾರೇ ತಪ್ಪು ಮಾಡಿದ್ರೂ ಅವರನ್ನು ಸುಮ್ಮನೆ ಬಿಡುವ ಪ್ರಶ್ನೆಯೇ ಇಲ್ಲ ಎಂದು ಆರೋಗ್ಯ ಸಚಿವ ಡಾ. ಕೆ. ಸುಧಾಕರ್ ತಿಳಿಸಿದ್ದಾರೆ.

ಸುಧಾಕರ್ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಕುರಿತು ಪ್ರತಿಕ್ರಿಯೆ ನೀಡಿರುವ ಅವರು ನಾಳೆ ನಾನು ಬಳ್ಳಾರಿಗೆ ಭೇಟಿ ನೀಡಿ ಎಲ್ಲಾ ಮಾಹಿತಿ ಪಡೆಯುತ್ತೇನೆ. ಮೃತಪಟ್ಟವರ ಕುಟುಂಬಸ್ಥರನ್ನೂ ಭೇಟಿ ಮಾಡುತ್ತೇನೆ. ತನಿಖೆ ನಡೆಸಲು ಸಮಿತಿ ರಚನೆ ಮಾಡಿದ್ದೇವೆ, ತನಿಖಾ ವರದಿ ಬರಲಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳುತ್ತೇವೆ.ಡೈರೆಕ್ಟರ್​​​ ನೇಮಕ ಪ್ರಕ್ರಿಯೆ ಬಗ್ಗೆ ಸೋಮಶೇಖರ್​​ ರೆಡ್ಡಿಗೆ ಗೊತ್ತಿಲ್ಲ, ಡೈರೆಕ್ಟರ್​​ ನೇಮಕ ಪ್ರಕ್ರಿಯೆ ಸರಿಯಾಗಿಯೇ ಆಗಿದೆ ಎಂದು ಸುಧಾಕರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ.